ಧಾರವಾಡ: ದೇಶಕಟ್ಟಬೇಕಾಗಿರುವ ಯುವಶಕ್ತಿ ಡ್ರಗ್ಸ್ ಗೆ ಬಲಿಯಾಗಬಾರದು ಎಂದು ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್ ಹೇಳಿದರು.
ಇಲ್ಲಿನ ಜೆಎಸ್ಎಸ್ ನ ಸಂಸ್ಥೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಮಾದಕ ವ್ಯಸನಗಳ ಕುರಿತ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಯಸ್ಸಿನ ಉತ್ಸಾಹ ಎಲ್ಲ ಮಾಡಲು ಹಚ್ಚುತ್ತದೆ. ಆದರೆ ಬದುಕು ಬಹಳ ಮುಖ್ಯ. ಹೀಗಾಗಿ ಇಂದಿನ ಯುವ ಶಕ್ತಿ ಯಾವುದೆ ಕಾರಣಕ್ಕೂ ಯುವಕರು ಡ್ರಗ್ಸ್ ಸೇರಿದಂತೆ ಮಾರಕ ವ್ಯಸನಗಳಿಗೆ ಬಲಿಯಾಗಬಾರದು. ಅದರ ಬದಲು ಉತ್ತಮ ಹವ್ಯಾಸಗಳತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ಹೇಳಿದರು.
ಜೆಎಸ್ಎಸ್ ಕಾಲೇಜು ಸೇರಿದಂತೆ ನೂರಾರು ಯುವಕರು ಡಾ.ಶಿವರಾಜ್ ಕುಮಾರ್ ಅವರನ್ನು ನೋಡಲುಮುಗಿ ಬಿದ್ದ ದೃಶ್ಯ ಕಂಡು ಬಂತು. ಇದೇ ವೇಳೆ ನೆರೆದಿದ್ದ ಯುವಕರ ಕೋರಿಕೆ ಮೇರೆಗೆ ಶಿವರಾಜ್ ಕುಮಾರ್ ಟಗರು ಸಿನೇಮಾ ಹಾಡಿಗೆ ಡ್ಯಾನ್ಸ್ ಮಾಡಿದರು. ಅಷ್ಟೇ ಅಲ್ಲ ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.
ಬೈರತಿ ರಣಗಲ್ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಇದೇ ವೇಳೆ ಶಿವರಾಜ್ ಕುಮಾರ್ ಮನವಿ ಮಾಡಿಕೊಂಡರು.