ಸುಳ್ಯ : ಇಸ್ಲಾಂನ ಪಂಚ ಆಧಾರ ಸ್ತಂಭಗಳಲ್ಲಿ ಹಜ್ ಕರ್ಮವು ಪರಮೋಚ್ಚ ಪಾವಿತ್ರÂ ಹೊಂದಿದ್ದು, ನಾಡಿನಲ್ಲಿ ಶಾಶ್ವ ತವಾಗಿ ಶಾಂತಿ ನೆಲೆಸುವಂತಾಗಲು ಮತ್ತು ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಿ ಅನುಗ್ರಹ ನೀಡುವಂತೆ ಹಜ್ ಯಾತ್ರಿಕರು ಪ್ರಾರ್ಥಿಸಬೇಕೆಂದು ಸುಳ್ಯ ತಾಲೂಕು ಸುನ್ನಿ ಜಂಇಯತ್ತುಲ್ ಉಲೆಮಾ ಒಕ್ಕೂಟದ ಅಧ್ಯಕ್ಷ ಅಸ್ಸಯದ್ ಕುಂಞಿಕೋಯ ತಂಙಳ್ ಸಅದಿ ಅವರು ಹೇಳಿದರು.
ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ಗೋಲ್ಡನ್ ಜುಬಿಲಿ ಅಂಗವಾಗಿ ಬಿಸ್ಮಿಲ್ಲಾ ಏರ್‌ಟ್ರಾವೆಲ್ಸ್ ಸಹಯೋಗದೊಂದಿಗೆ ಈ ಬಾರಿ ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ದುವಾಶೀರ್ವಚನಗೈದು ಅವರು ಮಾತನಾಡಿದರು.
ಗಾಂಧೀನಗರ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜೀ ಎಸ್. ಅಬ್ದುಲ್ಲಾ ಮಲಾ°ಡ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವನ್ನು ಉದ್ಘಾಟಿಸಿದ ಮೊಗರ್ಪಣೆ ಜುಮ್ಮಾ ಮಸೀದಿಯ ಮುದರ್ರಿಸ್ ಬಹು| ಅಬ್ದುಲ್ ರವೂಫ್ ಸಖಾಫಿ ಮಾತನಾಡಿದರು. ಹಜ್ ಯಾತ್ರಿಕರಿಗೆ ತರಬೇತಿಯನ್ನು ಅಲ್‌ಹಾಜ್ ಅಶ್ರಫ್ ಕಾಮಿಲ್ ಸಖಾಫಿ ವಯನಾಡ್ ಪ್ರಾತ್ಯಕ್ಷಿಕೆಯೊಂದಿಗೆ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಅನ್ಸಾರಿಯಾ ಅಧ್ಯಕ್ಷ ಹಾಜಿ. ಕೆ. ಎಂ. ಅಬ್ದುಲ್ ಮಜೀದ್, ಸ್ಥಳೀಯ ಖತೀಬ ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಬಹು| ಅಬೂಬಕ್ಕರ್ ಹಿಮಮಿ, ಹಾಜಿ ಅಬ್ಟಾಸ್ ಕಟ್ಟೆಕ್ಕಾರ್, ಎಸ್.ಎಂ.ಎ. ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ತಾಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಕಲ್ಲುಗುಂಡಿ, ಮದರಸ ಅಧ್ಯಾಪಕರ ಒಕ್ಕೂಟ ಇಬ್ರಾಹಿಂ ಸಖಾಫಿ ಪುಂಡೂರು, ಗ್ರೀನ್‌ವ್ಯೂ ಅಧ್ಯಕ್ಷ ಹಾಜಿ ಇಸ್ಮಾಯಿಲ್, ಬಾಬಾ ಹಾಜಿ ಎಲಿಮಲೆ, ಜೌಹರ್, ಬಿಸ್ಮಿಲ್ಲಾ ಏರ್ ಟ್ರಾವೆಲ್ಸ್‌ನ ವ್ಯವಸ್ಥಾಪಕರು, ಹಜ್ ಸೇವಾ ಘಟಕದ ಹಸನ್ ಹಾಜಿ ಉಪಸ್ಥಿತ ರಿದ್ದರು.
ಸಂಸ್ಥೆಯ ಅಧ್ಯಕ್ಷ ಕೆ. ಎಂ. ಮುಸ್ತಫ ಅವರು ಸ್ವಾಗತಿಸಿ, ಹಮೀದ್ ಬೀಜಕೊಚ್ಚಿ ವಂದಿಸಿದರು. ಸದರ್ ಮುಅಲ್ಲಿಂ ಹಮೀದ್ ಸಖಾಫಿ ಅವರು ಕುರ್‌ಆನ್ ಪಠಣಗೈದರು.