Advertisement
ಸುರತ್ಕಲ್‌ನ ಫಾಝಿಲ್ ಪ್ರಕರಣದಲ್ಲಿ ಹಂತಕರ ಸುಳಿವು ಲಭಿಸಿದೆ. ಆದರೆ ಪ್ರವೀಣ್ ಪ್ರಕರಣದಲ್ಲಿ ಹಂತಕರ ಜಾಡು ಪತ್ತೆಯಾಗಿರುವ ಬಗ್ಗೆ ಪೊಲೀಸ್ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ. ಕೇರಳದ ಕಣ್ಣೂರು ಪರಿಸರದಲ್ಲಿ ಹಂತಕರಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶೀಘ್ರವಾಗಿ ಪ್ರಕರಣ ಭೇದಿಸುವುದು ಕೂಡ ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಹತ್ಯೆಗೆ ಏನು ಕಾರಣ? ಪ್ರಮುಖ ಆರೋಪಿಗಳು ಯಾರು? ಎಂದು ಕಂಡುಹಿಡಿಯಲು ತನಿಖಾ ತಂಡಕ್ಕೆ ಸವಾಲಾಗಿದೆ ಅನ್ನುತ್ತಿದೆ ಚಿತ್ರಣ.
ಪ್ರವೀಣ್ ಹತ್ಯೆಗೆ ಮೊದಲು ಮಾಸ್ತಿಕಟ್ಟೆ ಪರಿಸರದ ಬೀದಿ ದೀಪಗಳನ್ನು ಆರಿಸಲಾಗಿತ್ತು ಅನ್ನುವ ಅಂಶ ಬೆಳಕಿಗೆ ಬಂದಿದೆ. ಹಂತಕರು ಮಾಸ್ತಿಕಟ್ಟೆ ಪೆಟ್ರೋಲ್ ಬಂಕ್‌ಗೆ ಬರುವ ಮೊದಲೇ ಕೊಲೆಯ ಸೂತ್ರಧಾರರು ಬಂದಿದ್ದು, ಕೃತ್ಯ ಎಸಗುವ ಸ್ವಲ್ಪ ಮೊದಲೇ ದೀಪ ಆರಿಸಿ ಹಂತಕರಿಗೆ ಸಹಕರಿಸಿರಬಹುದು ಎನ್ನಲಾಗಿದೆ. ಕೊಲೆ ದೃಶ್ಯ ಸಿಸಿ ಕೆಮರಾ ದಲ್ಲಿ ದಾಖಲಾಗಬಾರದು ಎಂಬ ಕಾರಣಕ್ಕೆ ಈ ತಂತ್ರ ಹೂಡಿರುವ ಸಾಧ್ಯತೆಯಿದೆ. ಹಲಾಲ್- ಜಟ್ಕಾ ವಿವಾದ?
ಹಲಾಲ್, ಜಟ್ಕಾವೇ ಹತ್ಯೆಗೆ ಕಾರಣವಾಯಿತು ಎಂಬ ಗುಮಾನಿ ಪೊಲೀಸರಿಗೆ ಕಾಡುತ್ತಿದ್ದರೂ ಸ್ಥಳೀಯವಾಗಿ ಇಂತಹ ಅನುಮಾನಗಳಿಲ್ಲ. ಏಕೆಂದರೆ ಬೆಳ್ಳಾರೆಯಲ್ಲಿ ಪ್ರವೀಣ್ ಮಾತ್ರವಲ್ಲದೆ ಇನ್ನಿತರ ಕೆಲವು ಹಿಂದೂಗಳು ಚಿಕನ್ ಸೆಂಟರ್ ನಡೆಸುತ್ತಿದ್ದರು. ಪ್ರವೀಣ್ ಅಂಗಡಿಗಿಂತ ಹೆಚ್ಚಿನ ವ್ಯಾಪಾರ ಬೇರೆ ಅಂಗಡಿಗಳಿಗಿತ್ತು. ಹಾಗಾಗಿ ಈ ವಿಷಯದಲ್ಲಿ ಪ್ರವೀಣ್ ಹತ್ಯೆ ಆಗಿರಲಾರದು ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ಕಂಡು ಬರುತ್ತಿದೆ. ಇದು ಮಸೂದ್ ಕೊಲೆಗೆ ಪ್ರತೀಕಾರದ ಕೃತ್ಯ ಎನ್ನುವುದರಲ್ಲಿ ಅನುಮಾನ ಇಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯ.
Related Articles
ಹಂತಕರು ಕೋಳಿ ಅಂಗಡಿ
ಮಾಲಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಪ್ರವೀಣ್ ಬದಲಾಗಿ ಬೆಳ್ಳಾರೆಯ ಇನ್ನೋರ್ವ ಕೋಳಿ ಅಂಗಡಿಯಾತನ ಮೇಲೆ ಅವರ ಕಣ್ಣಿತ್ತು. ಆತ ಸಿಗದಿದ್ದರೆ ಎರಡನೇ ಆಯ್ಕೆ ಪ್ರವೀಣ್ ಮೇಲಿತ್ತು. ಮೊದಲನೆಯಾತ ಆ ದಿನ ಸ್ಥಳದಲ್ಲಿ ಇಲ್ಲದ ಕಾರಣ ಹಂತಕರು ಪ್ರವೀಣ್ ಕತ್ತಿಗೆ ಮಚ್ಚು ಬೀಸಿ¨ªಾರೆ ಎನ್ನಲಾಗಿದೆ. ಮಚ್ಚು ಬೀಸಿದ ತಂಡದಲ್ಲಿ ಕೇರಳದ ಚಿಕನ್ ಸೆಂಟರ್‌ನವನು ಸೇರಿ¨ªಾನೆ ಎನ್ನುವ ಮಾಹಿತಿ ಲಭಿಸಿದೆ.
Advertisement
ಬಾಡಿಗೆ ಮನೆಯಲ್ಲಿ ಸಂಚುಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಶಫೀಕ್‌ನ ಬಾಡಿಗೆ ಮನೆಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತೇ ಎನ್ನುವ ಬಗ್ಗೆ ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದೆ. ಶಫೀಕ್ ಕುಟುಂಬವು ಒಂದು ವರ್ಷದಿಂದ ಬೆಳ್ಳಾರೆ ಮೇಲಿನ ಪೇಟೆಯ ವಾಣಿಜ್ಯ ಸಂಕೀರ್ಣದ ವಸತಿಗೃಹದಲ್ಲಿ ಬಾಡಿಗೆ ಆಧಾರದಲ್ಲಿ ವಾಸಿಸುತ್ತಿತ್ತು. ಹತ್ಯೆಗೆ ಕೆಲ ದಿನಗಳ ಹಿಂದೆ ಹಂತಕರು ಈ ಮನೆಗೆ ಬಂದಿದ್ದು ಇಲ್ಲೇ ಕೊಲೆಗೆ ರೂಪರೇಖೆ ಹಾಕಿದ್ದರು ಎಂಬ ಅನುಮಾನ ಮೂಡಿದ್ದು ಹೀಗಾಗಿ ಈ ದೃಷ್ಟಿಕೋನದಿಂದ ತನಿಖೆ ನಡೆಯುತ್ತಿದೆ.