Advertisement

ಖೊಟ್ಟಿ ಮತದಿಂದ ಗೆದ್ದಿದ್ದ ಪ್ರತಾಪಗೌಡ: ಬಸನಗೌಡ

11:45 PM Nov 16, 2019 | Lakshmi GovindaRaju |

ಸಿಂಧನೂರು: 2018ರಲ್ಲಿ ನಡೆದ ಮಸ್ಕಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನನಗೆ 60 ಸಾವಿರ ಮತ ನೀಡಿ ಧೈರ್ಯ ತುಂಬಿದ್ದಾರೆ. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲರು, ಖೊಟ್ಟಿ ಮತದಿಂದ ಗೆದ್ದು ಶಾಸಕರಾಗಿದ್ದರು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ ಆರೋಪಿಸಿದ್ದಾರೆ.

Advertisement

“ಉದಯವಾಣಿ’ ಜತೆ ಶನಿವಾರ ಮಾತನಾಡಿದ ಅವರು, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ವಿವಿಧ ಬೂತ್‌ಗಳಲ್ಲಿ ಪ್ರತಾಪಗೌಡರು ನಕಲಿ ಮತದಾರರನ್ನು ಸೃಷ್ಟಿಸಿ ಗೆದ್ದು, ಕ್ಷೇತ್ರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ವಿರುದ್ಧ ನಾನು ಕೋರ್ಟ್‌ ಮೆಟ್ಟಿಲೇರಿದ್ದು, ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದರು. ಮಸ್ಕಿ ಕ್ಷೇತ್ರದ ಹಿರಿಯ ನಾಯಕರೊಂದಿಗೆ ಚರ್ಚಿ ಸುತ್ತೇನೆ. ಒಂದು ವೇಳೆ, ಪ್ರತಾಪಗೌಡ ಅವರು ಕಳ್ಳ ಮತ ಪಡೆದಿರುವುದು ಸಾಬೀತಾದರೆ ಆ ಬಗ್ಗೆ ಕ್ಷೇತ್ರದ ಜನ ಹಾಗೂ ಪಕ್ಷ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next