ಬೆಂಗಳೂರು: ಸ್ಯಾಂಡಲ್ ವುಡ್ ನ ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಹುಟ್ಟೂರಿನಲ್ಲಿ ಅತ್ಯಾಧುನಿಕವಾದ ಮ್ಯೂಸಿಕ್ ಆಂಡ್ ಮೂವಿ ಸ್ಟುಡಿಯೋ ಒಂದನ್ನು ನಿರ್ಮಿಸುವ ಮೂಲಕ ಕರಾವಳಿ ಭಾಗದ ಸಿನಿಮಾಗಳಿಗೂ ಹೊಸ ಚೈತನ್ಯ ತುಂಬಿದ್ದಾರೆ.
ತಮ್ಮ ಜನ್ಮದಿನದಂದು ಹುಟ್ಟೂರಾಗಿರುವ ಕುಂದಾಪುರದ ಬಸ್ರೂರಿನಲ್ಲಿ ಈ ಸ್ಟೂಡಿಯೋ ಅನ್ನು ನಿರ್ಮಿಸಲಾಗಿದ್ದು, ಇದನ್ನು ಕೆ.ಜಿ, ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಉದ್ಗಾಟಿಸಿದ್ದಾರೆ. ಈ ಕುರಿತಾಗಿ ತಮ್ಮ ಟ್ಟೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರವಿ ಬಸ್ರೂರ್, ಇದು ನನ್ನ ಬದುಕಿನ ಅತ್ಯುತ್ತಮ ದಿನವಾಗಿದೆ. ನನಗೆ ನನ್ನ ಊರಿನಲ್ಲಿಯೇ ಒಂದು ಡ್ರೀಮ್ ಸ್ಟುಡಿಯೋವನ್ನು ನಿರ್ಮಿಸಬೇಕು ಎಂಬ ಕನಸು ಇತ್ತು. ಅದು ಇಂದು ನೆರವೇರಿದೆ. ಅದರಲ್ಲೂ ನನ್ನ ಮಾರ್ಗದರ್ಶರಾಗಿರುವ ಪ್ರಶಾಂತ್ ನೀಲ್ ಅವರು ಈ ಸ್ಟುಡಿಯೋವನ್ನು ಉದ್ಗಾಟಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜೈಲಿನಲ್ಲಿದ್ದ ಬಾಲಕಿ ಸಾವು ಪ್ರಕರಣ: ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ
ಈ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕಾಗಿರುವ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಅರ್ಪಿಸಿರುವ ರವಿ ಬಸ್ರೂರ್, ನೀವು ನನ್ನಲ್ಲಿದ್ದ ಕಲೆಯನ್ನು ಗುರುತಿಸಿದಿರಿ. ನನ್ನ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಿದಿರಿ, ನಾನು ಇಂದು ಯಾವುದೇ ಸಾಧನೆಯನ್ನು ಮಾಡಿದ್ದರೂ ಅದರ ಹಿಂದಿನ ಶಕ್ತಿ ನೀವೇ ಆಗಿದ್ದೀರಿ ಎಂದು ಹೇಳಿದ್ದಾರೆ.
ಕೆ.ಜಿ.ಎಫ್ ಸಿನಿಮಾದ ಸಂಗೀತ ನಿರ್ದೇಶನದ ನಂತರ ಎಲ್ಲರ ಮನೆಮಾತಾಗಿರುವ ರವಿ ಬಸ್ರೂರ್ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ:ನಾಲ್ತವಾಡ ಕುಟುಂಬದ ಮನೆಗೆ ರಾಷ್ಟ್ರೀಯ ಪುರಸ್ಕಾರ