ಹೊಸದಿಲ್ಲಿ: ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಜೀವ ತುಂಬುವ ಸಲುವಾಗಿ ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್ ಕಿಶೋರ್ ರಂಗ ಪ್ರವೇಶಿಸಿದ್ದಾರೆ. ಶನಿವಾರ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಸೇರಿದಂತೆ ನಾನಾ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಹಾಗೆಯೇ, ಹೊರಗಿನಿಂದ ವ್ಯೂಹ ರಚಿಸುವ ಬದಲು, ಪಕ್ಷಕ್ಕೇ ಸೇರಿ ಎಂದೂ ಪ್ರಶಾಂತ್ ಕಿಶೋರ್‌ಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
2024ರ ಲೋಕಸಭೆ ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು, ಪಕ್ಷವನ್ನು ಪುನಶ್ಚೇತನಗೊಳಿಸುವ ಕಾರ್ಯತಂತ್ರಕ್ಕೆ ಕಿಶೋರ್ ಅಣಿಯಾಗಿದ್ದು, ಪಕ್ಷದ ದೌರ್ಬಲ್ಯಗಳು ಹಾಗೂ ಮುಂದೇನು ಮಾಡಬಹುದು ಎಂಬ ಬಗ್ಗೆ ವಿಸ್ತೃತ ವಿವರವನ್ನು ನಾಯಕರಿಗೆ ನೀಡಿದ್ದಾರೆ. 2024ರ ಚುನಾವಣೆಯಲ್ಲಿ 370 ಸೀಟುಗಳ ಟಾರ್ಗೆಟ್ ಹಾಕಿಕೊಳ್ಳುವಂತೆ ಮತ್ತು ಎಲ್ಲೆಲ್ಲಿ ಪಕ್ಷ ದುರ್ಬಲವಾಗಿದೆಯೋ ಆ ಎಲ್ಲ ಕಡೆಯೂ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಲೋಕಸಭೆ ಮಾತ್ರವಲ್ಲದೇ ಮುಂಬರುವ ಗುಜರಾತ್, ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ಕುರಿತೂ ಚರ್ಚೆ ನಡೆಸಿದ್ದಾರೆ. ಅವರ ಸಲಹೆಗಳನ್ನು ಆಧರಿಸಿ ಪಕ್ಷವು 3 ಸದಸ್ಯರ ಸಮಿತಿ ರಚಿಸಿದ್ದು, ಅವುಗಳನ್ನು ಜಾರಿ ಮಾಡುವ ಕುರಿತು ಈ ಸಮಿತಿ ಪರಿಶೀಲಿಸಿ ಒಂದು ವಾರದಲ್ಲೇ ವರದಿ ನೀಡಲಿದೆ. ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಂದು ಕಾಂಗ್ರೆಸ್ ನಾಯಕ ಕೆ. ಸಿ. ವೇಣುಗೋಪಾಲ್ ಹೇಳಿದ್ದಾರೆ. ಜತೆಗೆ, ಪಕ್ಷ ಸೇರುವಂತೆ ಕೈ ನಾಯಕರು ನೀಡಿರುವ ಆಹ್ವಾನಕ್ಕೆ ಪ್ರಶಾಂತ್ ಕಿಶೋರ್ ಸಕಾರಾತ್ಮಕವಾಗಿ ಸºಂದಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ದೆಹಲಿ: ಹನುಮ ಜಯಂತಿ ಶೋಭಾ ಯಾತ್ರೆ ವೇಳೆ ಭುಗಿಲೆದ್ದ ಹಿಂಸಾಚಾರ
ಕಿಶೋರ್ ಸಲಹೆಗಳೇನು?
-2024ರ ಲೋಕಸಭೆ ಚುನಾವಣೆ ಯತ್ತ ಗಮನಹರಿಸಿ. 370 ಸೀಟುಗಳ ಟಾರ್ಗೆಟ್ ಹಾಕಿಕೊಳ್ಳಿ
-ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದಲ್ಲಿ ಸಂಘಟನಾತ್ಮಕ ಬದ ಲಾವಣೆಗಳನ್ನು ಮಾಡಿಕೊಳ್ಳಿ
-ಪಕ್ಷದ ಸಂವಹನಾ ಕಾರ್ಯತಂತ್ರ ವನ್ನು ಸಂಪೂರ್ಣ ಬದಲಾಯಿಸಿ.
-ಪಕ್ಷವು ದುರ್ಬಲವಾಗಿರುವ ಕಡೆಗಳಲ್ಲಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಿ
-ಗುಜರಾತ್‌ನಲ್ಲಿ ಪಾಟೀದಾರ್ ನಾಯಕ ನರೇಶ್ ಪಟೇಲ್‌ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ