Advertisement

ಜೆಡಿಎಸ್‌ ಶಾಸಕ ಪುತ್ರ ಪ್ರಸನ್ನ ಗೆ ಮೈಮುಲ್‌ ಹೊಣೆ

03:50 PM Mar 31, 2021 | Team Udayavani |

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಒಕ್ಕೂಟದ (ಮೈಮುಲ್‌) ಅಧ್ಯಕ್ಷರಾಗಿ ಪಿರಿಯಾಪಟ್ಟಣ ಜೆಡಿಎಸ್‌ ಶಾಸಕಕೆ.ಮಹದೇವ್‌ ಅವರ ಪುತ್ರ ಪಿ.ಎಂ.ಪ್ರಸನ್ನ ಅರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಂಗಳವಾರ ಕೊನೆ ಗಳಿಗೆಯಲ್ಲಿಪ್ರಸನ್ನ ನಾಮಪತ್ರ ಸಲ್ಲಿಸಿದ್ದರು.

Advertisement

ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಕಾರಣ, ಚುನಾವಣಾ ಅಧಿಕಾರಿಗಳು ಪ್ರಸನ್ನ ಅರೋಧವಾಗಿ ಅಧ್ಯಕ್ಷ ಸ್ಥಾನಕ್ಕೆಆಯ್ಕೆಯಾಗಿದ್ದಾರೆ ಎಂದು ಘೋಸಿದರು. ಪ್ರಸನ್ನ ಶಾಸಕ ಜಿ.ಟಿ. ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಯಾದಬಳಿಕ ಮಾತನಾಡಿದ ಪ್ರಸನ್ನ, ನಾನು ಜೆಡಿಎಸ್‌ ಪಕ್ಷದ ಬೆಂಬಲಿತಮೈಮುಲ್‌ ಅಧ್ಯಕ್ಷ. ನಮ್ಮ ನಾಯಕರು ಎಚ್‌.ಡಿ.ಕುಮಾರಸ್ವಾಮಿ. ಸದ್ಯದಲ್ಲೇ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಮೈಮುಲ್‌ ಅಧ್ಯಕ್ಷನಾಗುತ್ತೇನೆ ಎನ್ನುವ ನಿರೀಕ್ಷೆ ನನಗೆ ಇತ್ತು. ಹಿರಿಯನಿರ್ದೇಶಕರ ಸಹಕಾರದಿಂದ ಈ ಪಟ್ಟ ಸಿಕ್ಕಿದೆ. ನಮ್ಮಲ್ಲಿ ಯಾವುದೇಅಸಮಾಧಾನ, ಬೇಸರ ಇಲ್ಲ. ಎಲ್ಲರ ಒಮ್ಮತದ ಅಭಿಪ್ರಾಯದಿಂದ ನಾನುಅಧ್ಯಕ್ಷನಾಗಿದ್ದೇನೆ. ಹಾಲು ಉತ್ಪಾದಕರನ್ನು ಉಳಿಸಬೇಕು. ಮೈಮುಲ್‌ನ್ನುಅಭಿವೃದ್ಧಿಪಡಿಸಬೇಕು ಎಂಬುದೇ ನನ್ನ ಗುರಿ. ಮೈಮುಲ್‌ ಅಭಿವೃದ್ಧಿಗೆನಾನು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಇವುಗಳನ್ನು ಮುಂದಿನದಿನಗಳಲ್ಲಿ ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.

ಮೈಮುಲ್‌ ಆಡಳಿತ ಮಂಡಳಿಯಲ್ಲಿ ಚುನಾಯಿತ 15 ಮಂದಿಸೇರಿದಂತೆ ಒಟ್ಟು 20 ನಿರ್ದೇಶಕರು ಇದ್ದಾರೆ. ಇದರಲ್ಲಿ 12 ನಿರ್ದೇಶಕರುಜಿ.ಟಿ.ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಈ ಬಣಕ್ಕೆಬಹುಮತವಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಅವರನ್ನು ಕಣಕ್ಕಿಳಿಸುವ ಸಂಬಂಧಸೋಮವಾರ ರಾತ್ರಿಯೇ ಜಿ.ಟಿ.ದೇವೇಗೌಡರು ನಿರ್ಧಾರತೆಗೆದುಕೊಂಡಿದ್ದರು. ಹೀಗಾಗಿ ಎರಡನೇ ಬಾರಿ ನಿರ್ದೇಶಕರಾಗಿಆಯ್ಕೆಯಾಗಿರುವ ಪ್ರಸನ್ನ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ತಮ್ಮ ಬಣದ ಎಚ್‌.ಡಿ.ಕೋಟೆಯಕೆ.ಈರೇಗೌಡ, ಹುಣಸೂರಿನ ಕೆ.ಎಸ್‌.ಕುಮಾರ್‌, ಕೆ.ಆರ್‌.ನಗರದಎ.ಟಿ.ಸೋಮಶೇಖರ್‌ ಅವರ ಮನವೊಲಿಸುವಲ್ಲಿ ಜಿ.ಟಿ.ದೇವೇಗೌಡರುಯಶಸ್ವಿಯಾದ ಹಿನ್ನೆಲೆಯಲ್ಲಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಪ್ರಸನ್ನಅವರಿಗೆ ಒಲಿದು ಬಂದಿದೆ. ಇದರೊಂದಿಗೆ ಜಿ.ಡಿ.ದೇವೇಗೌಡರ ಬಣಮತ್ತೆ ಐದು ವರ್ಷಗಳ ಅವಧಿಗೆ ಮೈಮುಲ್‌ ಅಧಿಕಾರದ ಚುಕ್ಕಾಣಿಹಿಡಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next