Advertisement

Pranayam Movie Review; ಪ್ರೀತಿಯ ನೋಟ ಮತ್ತು ಆತ್ಮದ ಕಾಟ

03:53 PM Feb 10, 2024 | Team Udayavani |

ಒಂದು ಕಡೆ ರೊಮ್ಯಾಂಟಿಕ್‌, ಮತ್ತೂಂದು ಕಡೆ ಫ್ಯಾಮಿಲಿ ಡ್ರಾಮಾ, ಇನ್ನೊಂದು ಕಡೆ ಹಾರರ್‌ ಛಾಯೆ… ಇವೆಲ್ಲವನ್ನು ಹೊತ್ತುಬಂದಿರುವ ಸಿನಿಮಾ “ಪ್ರಣಯಂ’. ಸಿನಿಮಾ ಶೀರ್ಷಿಕೆಗೆ ತಕ್ಕಂತೆ ನವಜೋಡಿಯ ಪ್ರೀತಿ, ಪ್ರಣಯಕ್ಕೆ ಹೆಚ್ಚು ಒತ್ತುಕೊಟ್ಟಿರುವ ಸಿನಿಮಾವಿದು.

Advertisement

ನಿಶ್ಚಿತಾರ್ಥ, ಮದುವೆ, ತುಂಬು ಕುಟುಂಬ… ಇಂತಹ ಅಂಶಗಳೊಂದಿಗೆ ತೆರೆದುಕೊಳ್ಳುವ ಸಿನಿಮಾ ಮುಂದೆ ಸಾಗುತ್ತಾ ತನ್ನ ಮಗ್ಗುಲು ಬದಲಿಸುತ್ತದೆ. ನಿರ್ದೇಶಕರು ಪ್ರತಿಯೊಂದು ದೃಶ್ಯವನ್ನು ಸುಂದರವಾಗಿ, ಅದ್ಧೂರಿಯಾಗಿ ತೋರಿಸಬೇಕೆಂದು ಪ್ರಯತ್ನಿಸಿರುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಇದೇ ಕಾರಣದಿಂದ ಆಗಾಗ ಕಥೆಗಿಂತ, ಸನ್ನಿವೇಶಗಳೇ ಹೆಚ್ಚು ಮಹತ್ವ ಪಡೆದುಕೊಳ್ಳುವುದು.

ಆರಂಭದಿಂದ ಜಾಲಿರೈಡ್‌ ಮಾಡಿಕೊಂಡು ಬಂದ ನಿರ್ದೇಶಕರು ಸಿನಿಮಾದ ಟ್ವಿಸ್ಟ್‌ಗಳನ್ನು ಕಡೆಯ 20 ನಿಮಿಷದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣದಿಂದ ರೊಮ್ಯಾನ್ಸ್‌ ಮೂಡ್‌ ನಿಂದ ಪ್ರೇಕ್ಷಕರು ಕೂಡಾ ಹಾರರ್‌ ಫೀಲ್‌ಗೆ ಬರಬೇಕಾಗುತ್ತದೆ. ಅಷ್ಟಕ್ಕೂ ರೊಮ್ಯಾಂಟಿಕ್‌ ಸಿನಿಮಾ ಹಾರರ್‌ ಹೇಗಾಯಿತು ಎಂದು ನೀವು ಕೇಳಬಹುದು. ಅದೇ ಸಿನಿಮಾದ ಹೈಲೈಟ್‌.

ಇಲ್ಲೊಂದಿಷ್ಟು ರೋಚಕ ಅಂಶಗಳು ಸಾಗುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ. ಇಡೀ ಸಿನಿಮಾವನ್ನು ಸುಂದರವಾಗಿಸುವಲ್ಲಿ ಛಾಯಾಗ್ರಹಣದ ಪಾತ್ರ ಮಹತ್ವದ್ದು. ಕಥೆಗೆ ಪೂರಕವಾದ ಪರಿಸರವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಅದ್ಭುತವಾದ ಲೈಟಿಂಗ್‌ ಪರಿಸರ ಹಾಗೂ ಕಥೆಯ ಆಶಯವನ್ನು ಚೆಂದಗಾಣಿಸಿದೆ.

ನಾಯಕ ರಾಜವರ್ಧನ್‌ ಆ್ಯಕ್ಷನ್‌ ದೃಶ್ಯಗಳಲ್ಲಿ ಗಮನ ಸೆಳೆದರೆ, ಇತರ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕಿದೆ. ನಾಯಕಿ ನೈನಾ ಗಂಗೂಲಿ ಮೈ ಚಳಿ ಬಿಟ್ಟು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ರೊಮ್ಯಾಂಟಿಕ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆನ್ನುವವರಿಗೆ “ಪ್ರಣಯಂ’ ಒಳ್ಳೆಯ ಆಯ್ಕೆಯಾಗಬಹುದು.

Advertisement

ಆರ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next