Advertisement
ನಾಗಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ 3ನೇ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮಕ್ಕೆ ಸಂಘ ಅವರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಲಾಗಿತ್ತು. ಇದಕ್ಕೆ ಪರ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್‌ನಲ್ಲಿ ಬೆರಳೆನಿಕೆ ಮಂದಿ ಇದಕ್ಕೆ ಆಕ್ಷೇಪ ಎತ್ತಿದ್ದರು.
Related Articles
Advertisement
ಆರಂಭದಲ್ಲಿ ಭಾರತ ಮುಕ್ತ ಸಮಾಜ ಹೊಂದಿತ್ತು. ಸಿಲ್ಕ್ ರೂಟ್ ಸಹಿತ ಎಲ್ಲ ಪ್ರಮುಖ ದಾರಿಗಳ ಮೂಲಕ ದೇಶಕ್ಕೆ ಸಂಪರ್ಕವಿತ್ತು. ವ್ಯಾಪಾರಿಗಳು ಮತ್ತು ಹಲವಾರು ಮಂದಿ ವಿದೇಶಿ ದಾಳಿಕೋರರು ಇಲ್ಲಿಗೆ ಆಗಮಿಸಿದ್ದರು. ಶತಮಾನಗಳ ಹಿಂದೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು, ವಿವಿಧ ರೀತಿಯ ಆಡಳಿತ ವ್ಯವಸ್ಥೆ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ್ದ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಪ್ರಣಬ್ ಮುಖರ್ಜಿ ನೆನಪಿಸಿದ್ದರು.
ಈಗಿನ ಪರಿಸ್ಥಿತಿಯಲ್ಲಿ ಹಿಂಸೆಗೆ ವಿದಾಯ ಹೇಳಿ ಎಲ್ಲರನ್ನೂ ಒಳಗೊಳ್ಳುವಂಥ ವ್ಯವಸ್ಥೆಯತ್ತ ಹೊರಳಿಕೊಳ್ಳಬೇಕಾಗಿದೆ. ಎಲ್ಲ ರೀತಿಯ ಹಿಂಸೆ ಮತ್ತು ಭೀತಿಯ ವಾತಾವರಣದಿಂದ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ದೂರ ಇರಿಸಿಕೊಳ್ಳಬೇಕಾಗಿದೆ. ದ್ವೇಷದ ಮನೋಭಾವನೆ ರಾಷ್ಟ್ರೀಯತೆಯ ನಾಶಕ್ಕೆ ಕಾರಣವಾಗುತ್ತದೆ. ಅಸಹಿಷ್ಣುತೆ ನಮ್ಮ ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ. ಹಲವು ರಾಜವಂಶಗಳು, ಪ್ರಭಾವ ಶಾಲಿಯಾಗಿದ್ದ ರಾಜಕುಟುಂಬಗಳು ಭಾರತದ ಉತ್ತರ ಮತ್ತು ದಕ್ಷಿಣ ಭಾಗವನ್ನು ಆಳಿದ್ದವು.
“ಹಿಂದೂ, ಮುಸ್ಲಿಂ, ಸಿಕ್ಖ್ ಮತ್ತು ಭಾರತದ ಇತರ ಯಾವುದೇ ಗುಂಪಿಗೆ ಸೇರ್ಪಡೆಗೊಂಡವನು ʼತಾನುʼ ಎಂಬ ಭಾವನೆಯಿಂದ ಹೊರಗೆ ಬಂದಾಗ ಮಾತ್ರ ರಾಷ್ಟ್ರೀಯತೆ ಎಂಬ ವಿಚಾರ ನಮ್ಮೆಲ್ಲರಲ್ಲಿ ಮೈಗೂಡುತ್ತದೆ’ ಎಂದು ನೆಹರೂ ಬರೆದಿದ್ದನ್ನು ನೆನಪಿಸಿ ಭಾಷಣ ಮುಂದುವರಿಸಿದ್ದರು. ವಸುಧೈವ ಕುಟುಂಬಕಂ
1,800 ವರ್ಷಗಳ ಕಾಲ ತಕ್ಷಶಿಲಾ, ನಲಂದಾ ಸೇರಿದಂತೆ ವಿಶ್ವಮಾನ್ಯ ವಿವಿಗಳು ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತಿದ್ದವು. ನಮ್ಮ ದೇಶದ ರಾಷ್ಟ್ರೀಯತೆ ಎಂಬ ವಿಚಾರ ಏಕತೆಯಿಂದ ಉಂಟಾಗಿದೆ. ಶತಮಾನಗಳಿಂದಲೂ ಕೂಡ “ವಸುಧೈವ ಕುಟುಂಬಕಂʼ ಎಂಬ ತತ್ತ್ವದಲ್ಲಿ ನಂಬಿಕೆಯನ್ನು ಇರಿಸಿಕೊಂಡು ಬಂದಿದ್ದೇವೆ. ಕ್ರಿಸ್ತಪೂರ್ವ ಆರನೇ ಶತಮಾನದಿಂದ 600 ವರ್ಷಗಳ ಕಾಲ ಮುಸ್ಲಿಂ ಅರಸರ ಆಳ್ವಿಕೆ ದೇಶದಲ್ಲಿತ್ತು. ಬಳಿಕ ಈಸ್ಟ್ ಇಂಡಿಯಾ ಕಂಪೆನಿ ಆಡಳಿತದ ನೇತೃತ್ವ ವಹಿಸಿಕೊಂಡಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ದೇಶದ ಆಡಳಿತ ರಾಣಿಯ ನೇತೃತ್ವಕ್ಕೆ ಸಿಕ್ಕಿತ್ತು. ಹಲವಾರು ಆಡಳಿತಗಾರರು ಆಡಳಿತ ನಡೆಸಿದರೂ 5 ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ನಮ್ಮ ನಾಗರಿಕತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು ಎಂದು ಭರತ ಖಂಡದ ಐಹಿತ್ಯವನ್ನು ಸಭೆಯ ಮುಂದಿಟ್ಟಿದ್ದರು.
ತ್ರಿಪುರಾದಿಂದ ದ್ವಾರಕೆಯವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ ಎಂದು ಹೇಳುವುದೇ ರೋಮಾಂಚನ. ಲೆಕ್ಕವಿಲ್ಲದಷ್ಟು ಧರ್ಮಗಳು, ಜಾತಿಗಳು ಒಂದೇ ಸಂವಿಧಾನದ ಅಡಿಯಲ್ಲಿವೆ ಎಂದು ಹೇಳಿಕೊಳ್ಳುವುದೇ ಹೆಗ್ಗಳಿಕೆ. 122 ಭಾಷೆಗಳು, 1,600 ನುಡಿಕಟ್ಟು, 7 ಪ್ರಮುಖ ಧರ್ಮಗಳು, ಮೂರು ಪ್ರಮುಖ ಜನಾಂಗಗಳು ಒಂದೇ ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿಯೇ ಭಾರತೀಯ ಎಂದು ಕರೆಯಿಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇರುತ್ತವೆ. ಅದನ್ನು ನಿರಾಕರಿಸಲಾಗದು ಎನ್ನುವ ಮೂಲಕ ಬಹುತ್ವವನ್ನು ಸಾರಿದ್ದರು. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನೀಡಿದ ಭೇಟಿ ಹಾಗೂ ಅಲ್ಲಿ ಅವರು ಮಾಡಿದ ಭಾಷಣ ಭಾರತದ ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು.