Advertisement

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

11:29 PM Dec 18, 2024 | Team Udayavani |

ವಾಷಿಂಗ್ಟನ್‌: ಅಧಿಕಾರದಿಂದ ಕೆಳಗಿಳಿಯಲು ತಿಂಗಳು ಬಾಕಿ­ಯಿರುವಂತೆಯೇ ಅಧ್ಯಕ್ಷ ಬೈಡೆನ್‌ ಅವರು ಮಹತ್ವದ ನಿರ್ಣಯ ಕೈಗೊಂ­ಡಿದ್ದು, ಎಚ್‌1ಬಿ ವೀಸಾ ನಿಯಮ ಸಡಿಲಿಕೆಯ ಘೋಷಣೆ ಮಾಡಿದ್ದಾರೆ. ಇದರಿಂದ ಭಾರತದ ಸಾವಿರಾರು ಸಾಫ್ಟ್ವೇರ್‌ ತಂತ್ರಜ್ಞರಿಗೆ ಲಾಭವಾಗಲಿದೆ.

Advertisement

ಕೌಶಲಯುತ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಲು ಅಮೆರಿಕ ಕಂಪೆನಿಗಳಿಗೆ ನೆರವಾಗುವಂತೆ ಎಚ್‌-1ಬಿ ವೀಸಾ ವಿತರಣ ಪ್ರಕ್ರಿಯೆ ಸರಳೀಕರಣ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಯೋಜನೆಯನ್ನು ಅಮೆರಿಕ ರೂಪಿಸಿದೆ. ಈ ಹೊಸ ನೀತಿ ಜ.17ರಿಂದಲೇ ಜಾರಿಗೆ ಬರಲಿದೆ.

ಹೊಸ ನೀತಿಯಲ್ಲಿ ಏನಿದೆ?: ಈವರೆಗೆ ಎಚ್‌-1ಬಿಗೆ ವೀಸಾಗೆ ವಾರ್ಷಿಕ ಮಿತಿ ವಿಧಿಸಲಾಗುತ್ತಿತ್ತು. ಮಿತಿಗಿತಿಂತ ಹೆಚ್ಚಿನ ಅರ್ಜಿಗಳು ಇದ್ದರೆ ಲಾಟರಿ ಮೂಲಕ ಅವಕಾಶ ನೀಡಲಾಗುತ್ತಿತ್ತು. ಆಗ ಹಲವರಿಗೆ ಅರ್ಹತೆ ಇದ್ದರೂ ವೀಸಾ ಸಿಗುತ್ತಿರಲಿಲ್ಲ. ಈಗ ನಾನ್‌-ಪ್ರಾಫಿಟ್‌ ಸಂಸ್ಥೆಗಳು ಮತ್ತು ಸರಕಾರಿ ಸಂಶೋಧನ ಸಂಸ್ಥೆಗಳಿಗೆ ಎಚ್‌-1ಬಿ ವೀಸಾ ವಾರ್ಷಿಕ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ವಾರ್ಷಿಕ ಮಿತಿಗಿಂತ ಹೆಚ್ಚಿನ ಜನರಿಗೆ ಎಚ್‌-1ಬಿ ವೀಸಾಗಳು ದೊರೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next