Advertisement

ದಸರಾ ಸಂಭ್ರಮದಲ್ಲಿ ಸೂತಕದ ಛಾಯೆ : ರಾಜಮಾತೆಗೆ ಮಾತೃ ವಿಯೋಗ 

09:29 AM Oct 19, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಕಳೆಗಟ್ಟಿರುವ ವೇಳೆಯಲ್ಲಿ  ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರ ತಾಯಿ ಶುಕ್ರವಾರ ವಿಧಿವಶರಾಗಿದ್ದಾರೆ. 

Advertisement

ಕಳೆದ ಕೆಲ ದಿನಗಳಿಂದ  ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಚಿನ್ನಮಣಿ (98) ಅವರು ಮೈಸೂರಿ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. 

 ಅರಮನೆಯಲ್ಲಿ ಸೂತಕ  ಕಾಣಿಸಿಕೊಂಡ ಹಿನ್ನಲೆಯಲ್ಲಿ  ಒಡೆಯರ್‌ ರಾಜವಂಶಸ್ಥ ಮನೆಯಲ್ಲಿ ಸಂಭ್ರಮ ಇಲ್ಲವಾಗಿದೆ. 

ಅರಮನೆಯಲ್ಲಿ ನಡೆಯಬೇಕಾದ ಕೆಲ ಧಾರ್ಮಿಕ ವಿಧಿಗಳನ್ನು ಮೊಟಕುಗೊಳಿಸಲಾಗಿದೆ. ವಜ್ರಮುಷ್ಠಿ ಕಾಳಗವನ್ನು ರದ್ದು ಮಾಡಲಾಗಿದೆ. ಮೂರು ದಿನಗಳ ಕಾಲ ಸೂತಕ ಇರುವ ಹಿನ್ನಲೆಯಲ್ಲಿ  ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತಿಲ್ಲ. 

ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಮಂಟಪಕ್ಕೆ ಯದುವೀರ್‌ ಒಡೆಯರ್‌ ಅವರು ಪೂಜೆ ಸಲ್ಲಿಸಬೇಕಿತ್ತು. ಉತ್ತರ ಪೂಜೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. 

Advertisement

ಪುಟ್ಟ ಚಿನ್ನಮಣಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. 

ಅರಮನೆಯ ಸಮ್ಮರ್‌ ಪ್ಯಾಲೇಸ್‌ನಲ್ಲಿ  ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next