ಕಲಬುರಗಿ: ಕಾಂಗ್ರೆಸ್ ಪಕ್ಷ ತಲೆ ಮತ್ತು ಬುಡವೂ ಇಲ್ಲದ ಪಕ್ಷ ವಾಗಿದೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಟೀಕಿಸಿದರು.
ಕಲಬುರಗಿಯಲ್ಲಿ ನಡೆಯುತ್ತಿರುವ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ತಲೆ ಎಂದರೆ ಕೇಂದ್ರದಲ್ಲೂ ಅಧಿಕಾರಕ್ಕಿಲ್ಲ.ಬುಡ ಎಂದರೆ ರಾಜ್ಯದಲ್ಲೂ ಅಧಿಕಾರಕ್ಕಿಲ್ಲ. 70 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ತಲೆ- ಬುಡವಿಲ್ಲದಂತಾಗಿರುವುದು ಅದರ ವಾಸ್ತವಿಕತೆ ನಿರೂಪಿಸುತ್ತದೆ. ಆದ್ದರಿಂದ ಬಿಜೆಪಿ ಮತ್ತಷ್ಟು ಪ್ರಬಲಗೊಳ್ಳಲು ಹಿಂದುಳಿದ ವರ್ಗಗಳ ಶೇ.70ರಷ್ಟು ಮತಗಳು ಬಿಜೆಪಿಗೆ ಬರಲಿ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, 70 ವರ್ಷಗಳ ಇತಿಹಾಸದಲ್ಲಿ ನರೇಂದ್ರ ಮೋದಿ ಮೊಟ್ಟ ಮೊದಲ ಹಿಂದುಳಿದ ಮೊದಲ ಪ್ರಧಾನಿಯಾಗಿ ದೇಶವನ್ನು ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದಾರೆ ಎಂದರು.
ನಟಿ ತಾರಾ ಮಾತನಾಡಿ, ಹಿಂದುಳಿದ ವರ್ಗಗಳ ಹಿತ ಕಾಯುವಲ್ಲಿ ಬಿಜೆಪಿ ಮುಂದು ಎಂಬುದು ಎಲ್ಲರಿಗೆ ಈಗ ಮನವರಿಕೆಯಾಗಿದೆ ಎಂದರು.
ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ: 5 ವರ್ಷದಲ್ಲೇ ಗರಿಷ್ಠ ಸಾಧನೆ