Advertisement

ದಿವ್ಯಾಂಗರ ಬ್ಯಾಡ್ಮಿಂಟನ್‌ ವಿಶ್ವಕಪ್‌: ಭಗತ್‌, ಮನೀಷಾಗೆ ಪ್ರಶಸ್ತಿ

04:31 PM Nov 07, 2022 | Team Udayavani |

ಟೋಕಿಯೋ: ಕಳೆದ ವರ್ಷ ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಪ್ರಮೋದ್‌ ಭಗತ್‌; ಈಗ ಇನ್ನೊಂದು ಅಮೋಘ ಸಾಧನೆ ಮಾಡಿದ್ದಾರೆ. ಅವರು ಟೋಕಿಯೋದಲ್ಲೇ ನಡೆದ ದಿವ್ಯಾಂಗರ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

Advertisement

ಎಸ್‌ಎಲ್‌3 ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಅವರು, ಸತತ 2ನೇ ಬಾರಿಗೆ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಇನ್ನೊಬ್ಬ ಭಾರತೀಯ ಆಟಗಾರ ನಿತೇಶ್‌ ಕುಮಾರ್‌ರನ್ನು 21-19, 21-19ರಿಂದ ಮಣಿಸಿದರು. ಹಾಗೆಯೇ ಡಬಲ್ಸ್‌ನಲ್ಲೂ ಸ್ಪರ್ಧಿಸಿದ ಭಗತ್‌, ಮನೋಜ್‌ ಸರ್ಕಾರ್‌ ಜೊತೆಗೂಡಿ ಬೆಳ್ಳಿ ಪಡೆದರು.

ಫೈನಲ್‌ನಲ್ಲಿ ಭಾರತೀಯ ಜೋಡಿ ಇಂಡೋನೇಷ್ಯಾದ ಹಿಕ್ಮತ್‌-ರುಕಾಯೆಂಡಿಯೆದುರು ಸೋತುಹೋಯಿತು. ಇನ್ನು ಮಹಿಳಾ ವಿಭಾಗದ ಎಸ್‌ಯು5 ವಿಭಾಗದಲ್ಲಿ ಭಾರತದ ಮನೀಷಾ ರಾಮದಾಸ್‌ 21-15, 21-15ರಿಂದ ಜಪಾನಿನ ಮಾಮಿಕೊ ಟೊಯೊಡರನ್ನು ಮಣಿಸಿ ಚಿನ್ನ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next