Advertisement

Bhadravathi ಕಾಲೇಜಿನಲ್ಲಿ ಪ್ರಕಾಶ್ ರಾಜ್ ಸಂವಾದ: ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ

06:46 PM Aug 08, 2023 | keerthan |

ಭದ್ರಾವತಿ: ದೇಶ ವಿರೋಧಿ ಶಕ್ತಿಗಳೊಂದಿಗೆ ಸದಾ ಬೆಂಬಲಿಸಿ ಮಾತನಾಡುವ ಚಿತ್ರನಟ ಪ್ರಕಾಶ್‌ ರಾಜ್ ಅವರಿಗೆ ಕಾಲೇಜಿನ ಆವರಣದಲ್ಲಿ ಸಂವಾದ ನಡೆಸುವ ಅಧಿಕಾರವಿಲ್ಲ ಎಂದು ನ್ಯೂಟೌನ್ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ನ್ಯೂಟೌನ್ ಸರ್ಕಾರಿ ಕಲಾಮತ್ತು ವಾಣಿಜ್ಯ ಪದವಿ ಕಾಲೇಜಿನ ಸಭಾಂಗಣದಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ಎಂಬ ವಿಚಾರದ ಕುರಿತಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸಂಯುಕ್ತವಾಗಿ ಆಯೋಜಿಸಿದ್ದ ಚಿತ್ರನಟ ಪ್ರಕಾಶ್‌ರಾಜ್ ಅವರ ಸಂವಾದ ಕಾರ್ಯಕ್ರಮವನ್ನು ವಿರೋಧಿಸಿ ಕಾಲೇಜಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರನಟ ಪ್ರಕಾಶ್‌ ರಾಜ್‌ ಅಂತಹವರ ಸಂವಾದ ಕಾರ್ಯಕ್ರಮವನ್ನು ನಡೆಸಲು ಕಾಲೇಜಿನ ವಿದ್ಯಾರ್ಥಿಗಳಿಗೆ ತರಗತಿಗೆ ತೆರಳಲು ಅವಕಾಶ ನೀಡದೆ ವಿದ್ಯಾರ್ಥಿಗಳನ್ನು ಆರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ತಡೆಯುತ್ತಿರುವುದಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರಕಾಶ್‌ರಾಜ್ ವಿರುದ್ಧ ಹಾಗೂ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಘೋ಼ಣೆಗಳನ್ನುಕೂಗಿದರು.

ಬಿಗಿ ಪೋಲಿಸ್ ಬಂದೋಬಸ್ತ್: ಕಾಲೇಜಿನ ಸಮೀಪ ಬಿಗಿಯಾದ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತಾದರೂ ವಿದ್ಯಾರ್ಥಿಗಳು ಗುಂಪುಗೂಡಿ ಕಾಲೇಜಿನ ವಿದ್ಯಾರ್ಥಿಗಳಾದ ನಮ್ಮನ್ನು ಹೊರಗಿಟ್ಟು ಖಾಸಗಿ ಸಂಸ್ಥೆಯವರಿಗೆ ಕಾಲೆಜಿನ ಆವರಣದಲ್ಲಿ ಈ ರೀತಿ ದೇಶ ವಿರೋಧಿ ಭಾಷಣಕಾರರ ಸಂವಾದಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ಕಾಲೇಜಿನ ಪ್ರಾಂಶುಪಾಲರ ಜೊತೆಗೆ ತೀವ್ರ ವಾಗ್ವಾದ ನಡೆಸಿದರು.

ವಿದ್ಯಾರ್ಥಿಗಳಿಗೆ ಎಬಿವಿಪಿ ಬಿಜೆಪಿ ಸಾಥ್: ಬಿಜೆಪಿ ಮಂಡಲ ಅದ್ಯಕ್ಷ ಧರ್ಮಪ್ರಸಾದ್ ಎಬಿವಿಪಿ ಧನುಷ್ ಮುಂತಾದವರು ವಿದ್ಯಾರ್ಥಿಗಳ ಪ್ರತಿಭಟನೆಗೆ ಜೊತೆಯಾಗಿ ಪ್ರಕಾಶ್‌ ರಾಜ್ ದೇಶದ್ರೋಹಿ ಕನ್ನಯ್ಯನಂತಹವರ ಸಂಪರ್ಕದಲ್ಲಿರುವವರು. ಅಂತಹವರಿಗೆ ಕಾಲೇಜಿನ ಆವರಣದೊಳಗೆ ಸಂವಾದ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದು ಖಂಡನೀಯ ಎಂದು ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದರು.

Advertisement

ಪ್ರಾಂಶುಪಾಲರ ಪರದಾಟ: ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ಹೊಳ್ಳೆಸರ ಅವರು  ಒಂದೆಡೆ ಸ್ಥಳೀಯ ರಾಜಕೀಯ ಅಧಿಕಾರದವರ ಒತ್ತಡಕ್ಕೆ ಮಣಿದು ಕಾಲೇಜಿನ ಆವರಣದಲ್ಲಿ ಈ ರೀತಿ ಸಂವಾದ ಕಾರ್ಯಕ್ರಮಕ್ಕೆ ಅವಕಾಶ ನೀಡಿ, ಮತ್ತೊಂದೆಡೆ ಕಾರ್ಯಕ್ರವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಹಾಗೂ ಅವರ  ಆಕ್ರೋಷಭರಿತ ಪ್ರಶ್ನೆಗೆ ಉತ್ತರಿಸಲು ಆಗದೆ ಸಂದಿಗ್ಧತೆಗೆ ಸಿಲುಕಿದ್ದರು.

ಕಾಲೇಜಿನ ಹೊರಗಡೆ ಈ ರೀತಿ ಪ್ರತಿಭಟನೆ ನಡೆಯುತ್ತದರೆ ಅತ್ತ ಸಂವಾದ ಕಾರ್ಯಕ್ರಮ ಸಂಪೂರ್ಣಗೊಂಡು ಭಾಷಣಕಾರ ಪ್ರಕಾಶ್‌ರಾಜ್ ಹಾಗೂ ಸಂವಾದ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ಮುಗಿಸಿ ತೆರಳಿದರು.

ಗೋಮೂತ್ರ ಸಿಂಪಡಿಸಿ ಶುದ್ಧೀಕರಣ: ಪ್ರತಿಭಟನೆಯ ನಡುವೆಯೂ ಸಹ ಸಂವಾದ ಕಾರ್ಯಕ್ರಮ ಮುಗಿದು ಭಾಷಣಕಾರ ಪ್ರಕಾಶ್ ರಾಜ್ ಹಾಗೂ ಅಲ್ಲಿದ್ದವರೆಲ್ಲರೂ ತೆರಳಿದ ನಂತರ ಆ ಸಭಾಂಗಣ ಇಂತಹ ಕಾರ್ಯಕ್ರಮದಿಂದ ಅಪವಿತ್ರಗೊಂಡಿದೆ ಎಂದು ಪರಿಗಣಿಸಿದ ಆಜಾಗವನ್ನು ಪವಿತ್ರಗೊಳಿಸುವ ಸಲುವಾಗಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆದ ಸಭಾಂಗಣವನ್ನು ಗುಡಿಸಿ ಗೋಮೂತ್ರವನ್ನು ಸಿಂಪಡಿಸಿದರು.

ಎಬಿವಿಪಿ ಮುಖಂಡ ಧನುಶ್ ಸೇರಿದಂತೆ ಮುಂತಾದವರು ಧರಣಿಯಲ್ಲಿ ಇದ್ದರು. ಪ್ರಾಂಶುಪಾಲೆ  ಶೈಲಜಾ ಧರಣಿ ನಿರತ ವಿದ್ಯಾರ್ಥಿಗಳನ್ನು ಸಮಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ವಿದ್ಯಾರ್ಥಿಗಳು ಒಪ್ಪದೆ ಧರಣಿ ಮುಂದುವರೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next