Advertisement

“ಚೇಸ್‌’ಟೀಸರ್‌ಗೆ ಮೆಚ್ಚುಗೆ

09:46 AM Nov 28, 2019 | Lakshmi GovindaRaj |

ನವ ಪ್ರತಿಭೆ ವಿಲೋಕ್‌ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರುವ “ಚೇಸ್‌’ ಚಿತ್ರದ ಮೊದಲ ಟೀಸರ್‌ ಇತ್ತೀಚೆಗೆ ಹೊರಬಂದಿದ್ದು, ಇದೀಗ ಟೀಸರ್‌ ನಿಧಾನವಾಗಿ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗುತ್ತಿದೆ. ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‌ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನು ಇಟ್ಟುಕೊಂಡು ತಯಾರಾಗಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಚೇಸ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್‌, ಅವಿನಾಶ್‌ ನರಸಿಂಹರಾಜು, ಶೀತಲ್‌ ಶೆಟ್ಟಿ, ಅರ್ಜುನ್‌ ಯೋಗಿ, ಅರವಿಂದ ರಾವ್‌, ಪ್ರಮೋದ್‌ ಶೆಟ್ಟಿ, ರಾಜೇಶ್‌ ನಟರಂಗ, ರೆಹಮಾನ್‌ ಹಾಗೂ ಬಾಲಿವುಡ್‌ನ‌ “ಎಬಿಸಿಡಿ’ ಚಿತ್ರದಲ್ಲಿ ನಟಿಸಿದ ಸುಶಾಂತ್‌ ಪೂಜಾರಿ ಮೊದಲಾದವರು ನಟಿಸಿದ್ದಾರೆ.

Advertisement

ಸದ್ಯ ಚಿತ್ರದ ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ದೇಶಕ ವಿಲೋಕ್‌ ಶೆಟ್ಟಿ, “ಇದೊಂದು ಕ್ರೈಂ, ಥ್ರಿಲ್ಲರ್‌, ಮಿಸ್ಟ್ರಿ ಕಥಾನಕ ಹೊಂದಿರುವ ಚಿತ್ರ. ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫ‌ಲವಾಗಿ ಚಿತ್ರ ಮೂಡಿಬಂದಿದೆ. ನಮ್ಮ ಚಿತ್ರದ ಟೀಸರನ್ನು ಕನ್ನಡದ ಹಿರಿಯ ನಿರ್ದೇಶಕರಿಂದ ಬಿಡುಗಡೆ ಮಾಡಿಸಿದ್ದೆವು. ಈಗ ಚಿತ್ರದ ಟೀಸರ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್‌ ಹೊಂದಿಸಿಕೊಂಡು ಶೂಟ್‌ ಮಾಡುವುದು ಸ್ವಲ್ಪ ತಡವಾಯಿತು. ಆದಷ್ಟು ಬೇಗ ಚಿತ್ರವನ್ನು ತೆರೆಮೇಲೆ ತರುವ ಯೋಚನೆ ಇದೆ’ ಎನ್ನುತ್ತಾರೆ. ಇನ್ನು “ಚೇಸ್‌’ ಚಿತ್ರಕ್ಕೆ ಕಾರ್ತಿಕ್‌ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್‌ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. “ಸಿಂಪ್ಲಿಫ‌ನ್‌ ಮೀಡಿಯಾ ನೆಟ್‌ವರ್ಕ್‌’ ಮೂಲಕ ಮನೋಹರ್‌ ಸುವರ್ಣ, ಪ್ರದೀಪ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಜಂಟಿಯಾಗಿ “ಚೇಸ್‌’ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next