Advertisement

ISRO ಚಂದ್ರನ ಕುಳಿಯಿಂದ ಪ್ರಗ್ಯಾನ್‌ ಪಾರು

12:44 AM Aug 29, 2023 | Team Udayavani |

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಚರಿಸುತ್ತಿರುವ ಪ್ರಗ್ಯಾನ್‌ ರೋವರ್‌ ಎರಡು ಅಪಾಯಗಳಿಂದ ಪಾರಾಗಿದೆ.

Advertisement

ಇಸ್ರೋ ಟ್ವೀಟ್‌ ಮಾಡಿರುವ ಪ್ರಕಾರ ಆ. 27ರಂದು ಅದು 4 ಮೀ. ಆಳದ ಕುಳಿಯನ್ನು ಗಮನಿಸಿ ಸುತ್ತು ಬಳಸಿ ಪಾರಾಗಿದೆ. 3 ಮೀ. ದೂರದಲ್ಲಿ ಇರುವಾಗಲೇ ಅದನ್ನು ಪತ್ತೆ ಮಾಡಿದ ಪ್ರಗ್ಯಾನ್‌ ಸುಸೂತ್ರವಾಗಿ ಪಥ ಬದಲಿಸಿ ಮುಂದೆ ಸಾಗಿತು. ಜತೆಗೆ ಕುಳಿಯ ಎರಡು ಫೋಟೋಗಳನ್ನೂ ರವಾನಿಸಿದೆ.

ಇದಕ್ಕಿಂತ ಮೊದಲು ಅದು 100 ಮಿ.ಮೀ. ಆಳದ ಕುಳಿಯನ್ನು ಯಶಸ್ವಿಯಾಗಿ ದಾಟಿಕೊಂಡು ಮುನ್ನಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು, “ಮೊದಲು ಎದುರಾದದ್ದು ಸಣ್ಣ ಕುಳಿ. ಎರಡನೆಯದ್ದು ಕೊಂಚ ದೊಡ್ಡದಾಗಿತ್ತು. ಅದನ್ನು ತಪ್ಪಿಸಿಕೊಂಡು ತೆರಳಲು ನಿರ್ದೇಶಿಸಲಾಯಿತು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next