Advertisement

ಕೃಷಿ ಸಮ್ಮಾನ್‌: ಆರ್‌ಟಿಸಿ ಕಡ್ಡಾಯವಲ್ಲ

12:30 AM Mar 02, 2019 | |

ಉಡುಪಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರ ನೋಂದಣಿ ಕಾರ್ಯ ನಡೆಯುತ್ತಿದ್ದು, ಇದ ಕ್ಕಾಗಿ ಪಹಣಿ ಪತ್ರಿಕೆ ಬೇಡಿಕೆಯೂ ಏರುತ್ತಿದೆ. ನಾಡ ಕಚೇರಿಯಲ್ಲಿ ರುವ ಅಟಲ್‌ಜಿ ಕೇಂದ್ರ, ಗ್ರಾ.ಪಂ.ನಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಪಹಣಿ ಪತ್ರಿಕೆ ಯನ್ನು ಪಡೆಯಬಹುದಾಗಿದೆ. ಆದರೆ ಕೃಷಿ ಇಲಾಖೆಯ ಸೂಚನೆಯಂತೆ ಆರ್‌ಟಿಸಿ ಕಡ್ಡಾಯವೇನಲ್ಲ. ಕೇವಲ ಸರ್ವೇ, ಹಿಸ್ಸಾ ನಂಬ್ರ ಕೊಟ್ಟರೆ ಸಾಕು. ಸ್ವಯಂ ಘೋಷಣೆಯೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ, ಪಾಸ್‌ಪೋರ್ಟ್‌ ಆಕಾರದ ಭಾವಚಿತ್ರ ಲಗತ್ತಿಸ ಬೇಕೆಂದಿದೆ. 

Advertisement

ಆರ್‌ಟಿಸಿ ಕಡ್ಡಾಯವಲ್ಲವಾದರೂ ರೈತರು ಆರ್‌ಟಿಸಿ ಪ್ರತಿ ಪಡೆಯಲು ಧಾವಿಸುತ್ತಿದ್ದಾರೆ. ಉಡುಪಿಯಲ್ಲಿ ಆರ್‌ಟಿಸಿ ಬೇಡಿಕೆ ಸಾಮಾನ್ಯವಾಗಿದೆ, ಬೈಂದೂರು, ಬ್ರಹ್ಮಾವರ ಮೊದಲಾದೆಡೆಗಳಲ್ಲಿ ಭಾರೀ ಬೇಡಿಕೆ ಇದೆ. ಇದಕ್ಕೆ ಕಾರಣ ಆರ್‌ಟಿಸಿ ಕಡ್ಡಾಯವಲ್ಲ ಎಂಬ ನಿಯಮ ಹೆಚ್ಚಿನ ರೈತರಿಗೆ ಗೊತ್ತಿಲ್ಲ. 

ಉಡುಪಿ ಜಿಲ್ಲೆಯಲ್ಲಿ ಫೆ. 27ರ ವರೆಗೆ 5,500 ಮಂದಿ ಹೆಸರು ನೋಂದಣಿ ಮಾಡಿದ್ದರು. ಮಾಹಿತಿ ಕೊರತೆಯಿಂದ ಆರ್‌ಟಿಸಿ ಪ್ರತಿ ಬೇಡಿಕೆ ಸಲ್ಲಿಸುತ್ತಿದ್ದಾರೆ. 

ಹಿಂದೆ ಒಂದು ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚು ಜನರ ಹೆಸರು ನಮೂದು ಇದ್ದರೆ ಒಬ್ಬರಿಗೆ ಮಾತ್ರ ಸೌಲಭ್ಯ ದೊರಕುತ್ತಿತ್ತು. ಈಗ ಒಂದು ಸರ್ವೆ ನಂಬರ್‌ನಲ್ಲಿ ಐದು ಎಕ್ರೆ ಇದ್ದು, ಇದರಲ್ಲಿ ನಾಲ್ವರ ಹೆಸರು ನೋಂದಣಿ ಇದ್ದರೆ ನಾಲ್ವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. 

ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕೃತ ಸಣ್ಣ/ ಅತಿ ಸಣ್ಣ ರೈತರು ಅರ್ಜಿ ಸಲ್ಲಿಸಬಹುದಾಗಿದ್ದು, ಸ್ವಯಂ ಘೋಷಣೆಯನ್ನು ನಿಗದಿತ ನಮೂ ನೆಯಲ್ಲಿ ಸಲ್ಲಿಸುವ ಅರ್ಹ ರೈತರಿಗೆ ಒಂದು ವರ್ಷಕ್ಕೆ 6,000 ರೂ. ವನ್ನು ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ಒದಗಿಸಲಾಗುವುದು.

Advertisement

ಜಂಟಿ ಭೂ ಮಾಲಕರಿಗೆ ಮಾರ್ಗಸೂಚಿ
ಮಣಿಪಾಲ
: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ನೆರವು ಒದಗಿಸುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಜಂಟಿ ಭೂ ಮಾಲಕರನ್ನು ಪರಿಗಣಿಸುವ ಬಗ್ಗೆ ಸರಕಾರ ಫೆ. 27ರಂದು ಮಾರ್ಗಸೂಚಿ ಹೊರಡಿಸಿದೆ. ಆರಂಭದಲ್ಲಿ ಜಂಟಿ ಭೂ ಮಾಲಕರ ಬಗ್ಗೆ ಯಾವುದೇ ಮಾರ್ಗಸೂಚಿ ನೀಡದಿದ್ದುದರಿಂದ ಗೊಂದಲ ಉಂಟಾಗಿತ್ತು.

ಪತಿ, ಪತ್ನಿ, ಅಪ್ರಾಪ್ತ ಮಕ್ಕಳನ್ನು ಒಳಗೊಂಡ ಕುಟುಂಬ ವನ್ನು ರೈತ ಕುಟುಂಬ ಎಂದು ಪರಿಗಣಿಸಲಾಗಿದ್ದು, 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವವರು ಯೋಜನೆಗೆ ಅರ್ಹರಾಗಿದ್ದಾರೆ. ಜಂಟಿ ಮಾಲಕರಿಗೆ ಸಂಬಂಧಿಸಿದಂತೆ ಒಟ್ಟು ಭೂಮಿಯಲ್ಲಿ ಸಮಾನ ಹಂಚಿಕೆ ಮಾಡಿದಾಗ ಪ್ರತಿ ಕುಟುಂಬಕ್ಕೆ 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಇದ್ದಲ್ಲಿ ಅವರೆಲ್ಲರೂ ಯೋಜನೆಗೆ ಅರ್ಹ ರಾಗಿದ್ದಾರೆ ಎಂದು ಮಾರ್ಗಸೂಚಿ ತಿಳಿಸಿದೆ. 

ವಿ.ಎ. ಲಾಗಿನ್‌: ಘೋಷಣೆಗಳೊಂದಿಗೆ ಸ್ವೀಕೃತ ಅರ್ಜಿ ಗಳನ್ನು ಅಪ್‌ಲೋಡ್‌ ಮಾಡಿದ ಬಳಿಕ ಅವು ವಿಎ (ಗ್ರಾಮ ಕರಣಿಕರು) ಲಾಗಿನ್‌ಗೆ ಹೋಗುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ವಿಎಗಳು ಪರಿಶೀಲಿಸಿ ಅನು ಮೋದನೆ ನೀಡಲಿದ್ದಾರೆ.ಗ್ರಾಪಂಗಳಿಗೆ ಲಾಗಿನ್‌: ರೈತರು ನಾಡಕಚೇರಿಗೆ, ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಘೋಷಣೆಗಳನ್ನು ಸಲ್ಲಿ ಸುವ ತೊಂದರೆಯನ್ನು ತಪ್ಪಿಸಲು ಅವರದ್ದೇ ಗ್ರಾ.ಪಂ. ಕಚೇರಿ ಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಘೋಷಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಘೋಷಿಸಲಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸೇವೆ ಲಭ್ಯವಾಗುವ ಸಾಧ್ಯತೆ ಇದೆ. 

ಬ್ರಹ್ಮಾವರದಲ್ಲಿ ಆರ್‌ಟಿಸಿಗೆ ಬೇಡಿಕೆ ಹೆಚ್ಚಿಗೆ ಇದೆ. ಹಿಂದಿಗಿಂತ ದುಪ್ಪಟ್ಟು ಆಗಿದೆ. ನಾವು ಒಬ್ಬರಿಗೆ ಆರು ಆರ್‌ಟಿಸಿ ಪ್ರತಿಯನ್ನು ಕೊಡುವ ಕ್ರಮ ಇಟ್ಟುಕೊಂಡಿದ್ದೇವೆ. ಇದಕ್ಕೆ ಕಾರಣ ಹೆಚ್ಚು ಜನರಿಗೆ ಸವಲತ್ತು ಸಿಗಬೇಕೆಂಬುದು. ಕೃಷಿ ಇಲಾಖೆಯವರು ಆರ್‌ಟಿಸಿ ಕಡ್ಡಾಯವಲ್ಲ ಎಂದು ಹೇಳುವುದರಿಂದ ಆರ್‌ಟಿಸಿ ಬೇಡಿಕೆ ಸಮಸ್ಯೆ ಇಲ್ಲವಾಗುತ್ತದೆ. 
– ಕಿರಣ್‌ ಬೋರಯ್ಯ, 
ತಹಶೀಲ್ದಾರ್‌, ಬ್ರಹ್ಮಾವರ 

ಆರ್‌ಟಿಸಿಗೆ ಉಡುಪಿಯಲ್ಲಿ ಸಾಮಾನ್ಯ ಬೇಡಿಕೆ ಇದೆ ವಿನಾ ವಿಶೇಷ ಬೇಡಿಕೆ ಎಂದು ಇಲ್ಲ.          
– ಪ್ರದೀಪ್‌ ಕುಡೇìಕರ್‌,
ತಹಶೀಲ್ದಾರ್‌, ಉಡುಪಿ

ಕೃಷಿ ಸಮ್ಮಾನ್‌ ಅರ್ಜಿ ಸಲ್ಲಿಕೆಗೆ ಆರ್‌ಟಿಸಿ ಕಡ್ಡಾಯವಲ್ಲ. ಕೇವಲ ಸರ್ವೆ, ಹಿಸ್ಸಾ ನಂಬ್ರ ನೀಡಿದರೆ ಸಾಕು. ಜಂಟಿ ಖಾತೆ ಇದ್ದರೂ ಎಲ್ಲರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. 
– ಚಂದ್ರಶೇಖರ್‌ , ಉಪನಿರ್ದೇಶಕರು,  ಕೃಷಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next