Advertisement

ಆವಾಸ್‌ ಯೋಜನೆಗೆ ಸಣ್ಣ ಉಳಿತಾಯ ನಿಧಿಯ ಹಣ?

11:42 AM Jan 16, 2018 | |

ನವದೆಹಲಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಬೇಕಾದ ಹಣವನ್ನು ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Advertisement

ಸಣ್ಣ ಉಳಿತಾಯ ನಿಧಿಯಲ್ಲಿ ಸುಮಾರು 1.2 ಲಕ್ಷ ಕೋಟಿ ರೂ.ಗಳಿದ್ದು, ಆ ಪೈಕಿ 10 ಸಾವಿರ ಕೋಟಿ ರೂ.ಗಳನ್ನು 2017-18ರ ವಿತ್ತೀಯ ವರ್ಷ ಮುಗಿಯುವವರೆಗೆ ಪಿಎಂ ಆವಾಸ್‌ ಯೋಜನೆಗೆ ಬಳಸು ವುದು ಸರ್ಕಾರದ ಯೋಚನೆ ಎಂದು ಮೂಲಗಳು ತಿಳಿಸಿವೆ. 

ಇದರಿಂದ ಪ್ರಸಕ್ತ ವರ್ಷದಲ್ಲಿ ಆವಾಸ್‌ ಯೋಜನೆಗಾಗಿ 16,042 ಕೋಟಿ ರೂ.ಗಳನ್ನು ಬಳಸಿದಂತಾಗಲಿದೆ. ಇದೇ ವೇಳೆ, ಮುಂದಿನ ವರ್ಷ ಯೋಜನೆಗೆ 30 ಸಾವಿರ ಕೋಟಿ ರೂ. ಮೀಸಲಿಡುವಂತೆ ಪ್ರಸ್ತಾಪ ಸಲ್ಲಿಸಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next