Advertisement
ಕಾಯಾ, ವಾಚಾ, ಮನಸಾ ಕೂರಬೇಕು…: “ಈತನಕ ನಾವೇನು ಕಲ್ತೇವಿ, ಅದರೊಳಗ ನನಗೇನು ಬರೋದಿಲ್ಲ ಅನ್ನೋದನ್ನು ಗುರುತು ಮಾಡ್ಕೊಬೇಕ್ರಿ. ಗುರುಗಳು ಕಲಿಸಿದ್ದೆಲ್ಲ, ನಮಗೆ ಕೈ ಹತ್ತಿರಂಗಿಲ್ಲ. ಜೊತೆಗೆ, ಇವತ್ತಿನ ಕಾಲಘಟ್ಟದಾಗ ಗುರುಗಳು, ಶಿಷ್ಯನ ಅಸೋಸಿಯೇಷನ್ ಕಡಿಮೆ ಆಗೈತಿ. ಸಮಯ ಇರೋದಿಲ್ಲ. ಹೀಗಾಗಿ, ಶಿಷ್ಯನ ವೀಕ್‌ನೆಸ್ ಏನು ಅಂತ ಗುರು ತಿಳ್ಕೊಂಡು ತಿದ್ದೋದು, ಕಷ್ಟ ಆಗೈತಿ. ಅಸೋಸಿಯೇಷನ್ ಬಂದುಬಿಟ್ರೆ, ಹೇಗೆ ಪ್ರಾಕ್ಟೀಸ್ ಮಾಡಬೇಕು ಅನ್ನೋದು ತಿಳಿತಾ ಹೋಕ್ತದ. ನಮಗೇನು ಬರೋಲ್ಲ ಅನ್ನೋದು ಗುರುಗಳಿಗೆ ಚೆನ್ನಾಗಿ ಅರ್ಥ ಆಗಿರ್ತದೆ. ಹಿಂದೆಲ್ಲಾ ಅದನ್ನು ತೋರಿಸ್ಕೊಡೋರು. ಆಗೆಲ್ಲ ಸಮಯ ಇರ್ತಿತ್ತು.
Related Articles
* ಪಂಡಿತ್ ರವೀಂದ್ರ ಯಾವಗಲ್, ಹಿರಿಯ ಹಿಂದೂಸ್ತಾನಿ ತಬಲಾ ವಾದಕರು
Advertisement
ಕಾನ್ಷಿಯಸ್ ಮೈಂಡ್‌ನಲ್ಲಿ ಅಭ್ಯಾಸ: ಅಭ್ಯಾಸ ಮಾಡುವಾಗ, ಮೊದಲು ಸರಿಯಾಗಿ ಕುಳಿತುಕೊಳ್ಳಬೇಕು. ಇರಿಸುಮುರಿಸಾಗುವಂತೆ ಕೂತ್ಕೊಂಡರೆ, ತುಂಬಾ ಹೊತ್ತು ಕೂರೋಕೆ ಆಗೋಲ್ಲ. ಗುರುಗಳು ಹೇಳಿಕೊಡುವ ರೀತಿಯಲ್ಲೇ ಕುಳಿತುಕೊಳ್ಳಬೇಕು. ನಮಗೆ ಮಜಲ್ ಮೆಮೊರಿ ಅಂತಿರುತ್ತದೆ. ಅದಕ್ಕಾಗಿ, ಬೇಸಿಕ್ ಪಾಠಗಳನ್ನು ನುಡಿಸಬೇಕು. ಆದಷ್ಟೂ, ಬೆಳಗಿನ ವೇಳೆಯನ್ನು ಅದಕ್ಕೋಸ್ಕರ ಮೀಸಲಾಗಿಡಬೇಕು. ಇಲ್ಲಿ ವಿಷಯ ನೋಡೋಕೆ ತುಂಬ ಸುಲಭವಾಗಿರುತ್ತದೆ. ಚೆನ್ನಾಗಿ ಕೇಳುತ್ತದೆ. ಅದರ ಕ್ಯಾರೆಕ್ಟರ್, ನುಡಿಸಾಣಿಕೆಯನ್ನು ಅರ್ಥ ಮಾಡಿಕೊಳ್ಳ ಬೇಕಾದರೆ, ಸಾವಿರಾರು ಸಲ ಅಭ್ಯಾಸ ಮಾಡಿದರೆ ಮಾತ್ರ ಸಾಧ್ಯವಾಗೋದು. ಅಂದರೆ, ಬೆರಳಿಗೆ ಮದಂಗದ ಪಾಠ, ನಡೆ ಅರ್ಥ ಆಗುತ್ತೆ. ಇಂಥ ಕಡೆ ಹೋಗಿ ಕೂತ್ಕೊಬೇಕು. ಇಷ್ಟು ಪ್ರಷರ್ ಕೊಟ್ಟಾಗ, ಆ ನಾದ ಬರುತ್ತದೆ ಅನ್ನೋದು ತಿಳಿಯುತ್ತದೆ. ಈ ನಾದ ಬರಿಸೋಕೆ ಸಾವಿರಾರು ಸಲ ಅಭ್ಯಾಸ ಮಾಡಬೇಕು. ಆಗ, ಮದಂಗಕ್ಕೂ- ಕೈಗೂ, ಅವಿನಾಭಾವ ಸಂಬಂಧ ಬೆಳೆಯುತ್ತದೆ. ಬಹಳ ಮುಖ್ಯವಾದ ವಿಚಾರ ಏನೆಂದರೆ, ಅಭ್ಯಾಸ ಮಾಡಿದರೆ ಸಾಲದು. ಕೇಳ್ಮೆ ಜ್ಞಾನ ಬೆಳೆಸಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮಕ್ಕೆ ಹೋಗಿ, ಕೂತು ಕಲಿಯಬೇಕು. ಏಕೆಂದರೆ, ಏತಕ್ಕೆ ನುಡಿಸಿ¨ಾರೆ ಅಂತ ರೆಕಾರ್ಡಿಂಗ್‌ನಲ್ಲಿ ಗೊತ್ತಾಗಲ್ಲ. ಅಲ್ಲಿ ಕೇಳಿದ್ದನ್ನು ಮನೆಯಲ್ಲಿ ಪ್ರಾಕ್ಟೀಸ್ ಮಾಡಬೇಕು. ಒಂದೇ ಕೃತಿಗೆ ಇನ್‌ಡೋರ್‌ನಲ್ಲಿ ನುಡಿಸೋದೇ ಬೇರೆ, ಔಟ್‌ಡೋರ್‌ನಲ್ಲಿ ನುಡಿಸೋದೇ ಬೇರೆಯಾಗಿರುತ್ತದೆ. ಇದನ್ನೆಲ್ಲಾ ಗಮನಿಸಿ, ನಮ್ಮ ನುಡಿಸಾಣಿಕೆಯಲ್ಲಿ ಅಳವಡಿಸಬೇಕಾದರೆ, ಹೆಚ್ಚು ಹೆಚ್ಚು ಸಂಗೀತ ಕೇಳಬೇಕು. ನಂತರ, ಕಾನ್ಷಿಯಸ್ ಮೈಂಡ್‌ನಲ್ಲಿ ಅಭ್ಯಾಸ ಮಾಡಬೇಕು. ಸಬ್ ಕಾನ್ಷಿಯಸ್ ಮೈಂಡ್‌ಗೆ ಮನೋಧರ್ಮ ಸಂಗೀತ ತಿಳಿಯೋಕೆ ಬಿಡಬೇಕು. ಸಂಗೀತ ಕಿವಿ ಮೇಲೆ ಬಿದ್ದಷ್ಟೂ ವಾದ್ಯದ ಮೇಲೆ ಕೈ ಚೆನ್ನಾಗಿ ಓಡುತ್ತದೆ. ಈ ಸೋಶಿಯಲ್ ಮೀಡಿಯಾ ನೋಡಿ ಸಂಗೀತ ಕಲಿಯೋಕೆ ಆಗಲ್ಲ. ಮಾಹಿತಿಯನ್ನು ಗುರುಗಳೂ ಕೊಡ್ತಾರೆ. ಸೋಶಿಯಲ್ ಮೀಡಿಯಾ ಕೂಡ ಕೊಡುತ್ತದೆ. ಆದರೆ, ನಮ್ಮ ತಪ್ಪನ್ನು ಸರಿಮಾಡೋದು ಗುರುಗಳು, ಸೋಶಿಯಲ್ ಮೀಡಿಯಾ ಅಲ್ಲ. ಈ ಎಚ್ಚರ ಇಟ್ಕೊಂಡು ಅಭ್ಯಾಸ ಮಾಡಿದರೆ ಒಳ್ಳೆಯದು.* ವಿದ್ವಾನ್ ಬಿ.ಸಿ. ಮಂಜುನಾಥ್, ಹಿರಿಯ ಮೃದಂಗ ವಾದಕರು ಊಟ, ನಿದ್ದೆಯಂತೆ ಪ್ರಾಕ್ಟೀಸು!: ಪ್ರಾಕ್ಟೀಸ್ ಅನ್ನೋದು, ಊಟ, ನಿದ್ರೆಯಂತೆ ಆಗಬೇಕು. ಕಾಲೇಜಿಗೆ, ಆಫೀಸಿಗೆ ಹೋಗ್ತಿವಲ್ಲ; ಆ ಥರಾನೇ ಪ್ರಾಕ್ಟೀಸೂ ಆಗಬೇಕು. ಅದಕ್ಕೆ ಶ್ರದ್ಧೆ, ಶಿಸ್ತು ಇರಬೇಕು. ಇದು ಬರಬೇಕು ಅಂದರೆ, ಸಂಗೀತದ ಬಗ್ಗೆ ಪ್ಯಾಶನ್ ಹುಟ್ಟಬೇಕು. ಕುಂತರೂ, ನಿಂತರೂ, ಅದನ್ನೇ ಯೋಚೆ° ಮಾಡುತ್ತಿರಬೇಕು. ಹೆಚ್ಚಿನವರಿಗೆ, ಅಪ್ಪ- ಅಮ್ಮನ ಒತ್ತಾಯಕ್ಕೋ, ರಿಯಾಲಿಟಿ ಶೋನಲ್ಲಿ ನಾನೂ ಘಟಂ ನುಡಿಸಬೇಕು ಅನ್ನೋ ಆಸೆಯಿಂದಲೋ, ಸಂಗೀತದ ಮೇಲೆ ಆಸಕ್ತಿ ಹುಟ್ಟಿಬಿಡುತ್ತದೆ. ಅಷ್ಟಾದರೆ ಸಾಲದು. ಅದೇ ಪ್ಯಾಶನ್ ಆಗಬೇಕು. ಆಗ ಮಾತ್ರ ಪ್ರಾಕ್ಟೀಸ್ ಚೆನ್ನಾಗಿ ಆಗುವುದು. ಪ್ರಾಕ್ಟ್ರೀಸ್ ಅಂದರೆ, ಲಯದ ಜೊತೆಗೆ ಗೆಳೆತನ ಬೆಳೆಸುವುದು. ಇದಕ್ಕಾಗಿ ಆ್ಯಪ್‌ಗ್ಳು ಇವೆ. ಅದರ ಜೊತೆಗೆ ಪ್ರಾಕ್ಟೀಸ್ ಮಾಡ್ತಾ ಹೋದರೆ, ತಾಳ ಬಿಗಿಯಾಗುತ್ತದೆ. ಪ್ರಾಕ್ಟೀಸ್ ಅಂದರೆ, ಒಂದೇ ದಿನ ಗಂಟೆಗಟ್ಟಲೆ ಕೂರುವುದಲ್ಲ. ಮೊದಲು ಅರ್ಧ ಗಂಟೆಯಿಂದ ಶುರು ಮಾಡಿ, ಐದೈದು ನಿಮಿಷ ಜಾಸ್ತಿ ಮಾಡ್ತಾ ಹೋಗಬೇಕು. ಆಗ, ಸಂಗೀತದ ಕಲಿಕೆಯಲ್ಲಿ ಆಸಕ್ತಿ, ಪ್ಯಾಶನ್ ಬೆಳೆಯುತ್ತದೆ. ಘಟಂ ವಾದ್ಯದಲ್ಲಿ ನಿಜವಾದ, ಪೃಫೆಕ್ಟ್ ಅನ್ನುವಂಥ ಟೋನ್ ಬರೋಕೆ, 8ರಿಂದ 10 ತಿಂಗಳ ಸತತ ಪ್ರಾಕ್ಟೀಸ್ ಅಗತ್ಯವಾಗಿ ಬೇಕು. ಅದರಲ್ಲಿ ನಾದ ಹುಟ್ಟಬೇಕಾದರೆ, ನಮ್ಮ ಕೈ ಅದರ ಜೊತೆ ಚೆನ್ನಾಗಿ ಪಳಗಬೇಕು. ಸಂಗೀತವೂ ಒಂದು ಭಾಷೆಯೇ. ಆರಂಭದಲ್ಲೇ ಒಂದು ಪ್ಯಾರಾಗ್ರಾಫ್ ಬರೆಯೋಕೆ ಹೇಗೆ ಆಗೋಲ್ಲವೋ, ಹಾಗೆಯೇ, ಸಂಗೀತದಲ್ಲೂ ಏಕಾಏಕಿ ಘಟಂ ನುಡಿಸೋಕೆ ಆಗೋಲ್ಲ. ಅಕ್ಷರ ಕಲಿಯಬೇಕು. ಸಂಗೀತದಲ್ಲೂ ತಾ ದಿ ತೋಂ ನಂ ಅಂತ ಬಾಲ ಪಾಠ ಇದೆ. ಇದಕ್ಕೆ “ಕಿಟ’ ಅನ್ನೋ ಪದ ಜೋಡಣೆ ಮಾಡಿ, ಮುಂದುವರಿಸೋದು. ವಾಕ್ಯ ರಚನೆ, ಕತೆ ಬರೆಯೋದು, ಆಮೇಲೆ ನಮ್ಮದೇ ಸ್ಟೋರಿ. ಇದೇ ಪ್ಯಾಟ್ರನ್‌ನಲ್ಲೇ ಸಂಗೀತವನ್ನೂ ಕಲಿಯಬೇಕಾಗುತ್ತದೆ. ಪ್ರಾಕ್ಟೀಸ್ ಅನ್ನೋದು ಗುರುಗಳ ಮೇಲೆ ತೀರ್ಮಾನ ಆಗುತ್ತದೆ. ನನ್ನ ಪ್ರಕಾರ, “ತರಿಕಿಟ’ ಅನ್ನೋದು ಬಹಳ ಮುಖ್ಯ. ಇದನ್ನು ಗಂಟೆಗಟ್ಟಲೆ ನುಡಿಸಬೇಕು. ಒಂಥರಾ ಬೋರ್ ಆಗೋಕೆ ಶುರುವಾಗುತ್ತದೆ. ವಿಧಿ ಇಲ್ಲ. ಇದು ಬೆರಳಲ್ಲಿ ಕೂರಲೇಬೇಕು. ಈ ಪ್ರಯತ್ನದಲ್ಲಿ ಯಶಸ್ಸು ಕಾಣಲು ಏಕಾಗ್ರತೆ ಬೇಕು. ಸ್ವಲ್ಪ ಗಮನ ವಿಕೇಂದ್ರಿಕರಣ ಆದರೂ, ತಾಳ ಚೆಲ್ಲಾಪಿಲ್ಲಿಯಾಗಬಹುದು. ಹೀಗಾಗಿ, ಸಂಗೀತ, ಪ್ರಾಕ್ಟೀಸ್ ಅನ್ನೋದೆಲ್ಲಾ ಮೆಡಿಟೇಷನ್ ಇದ್ದಹಾಗೆ. ಇದನ್ನು ಹೆಚ್ಚು ಹೆಚ್ಚು ಮಾಡಿದಷ್ಟೂ ಸಂಗೀತ ನಮ್ಮೊಳಗೆ ಹೊಕ್ಕುತ್ತದೆ.
* ವಿದ್ವಾನ್ ಘಟಂ ಗಿರಿಧರ ಉಡಪ * ಕಟ್ಟೆ