ಕುಷ್ಟಗಿ : ಕೃಷ್ಣಾ ಬಿ-ಸ್ಕೀಮ್ ಯೋಜನೆ ರಾಷ್ಟ್ರೀಯ ಯೋಜನೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕರ ಚಿಣಿ ಹೇಳಿದರು.
ಭಾನುವಾರ, ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕಾರ ಚಿಣಿ ಅವರ ಅಭಿಮಾನಿ ಬಳಗದಿಂದ 2022ರ ಪಾಕೇಟ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಭಾಗದ ಕೃಷ್ಣಾ ಬಿಸ್ಕೀಂ ಯೋಜನೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಹಾಗೂ ಬಜೆಟ್ ನಲ್ಲಿ ಘೋಷಣೆಯೂ ಆಗಿದೆ. ತುಂಗಾಭದ್ರ ಮೇಲ್ದಂಡೆ ಯೋಜನೆ ಈಗಾಗಲೇ ರಾಷ್ಟ್ರೀಕರಣವಾಗಿದೆ. ಹಿಂದುಳಿದ ಈ ಭಾಗದಲ್ಲಿ ಐ.ಎ.ಎಸ್ ಚಿಂತನೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಆಗಿದೆ ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಐ.ಎ.ಎಸ್ ಹಾಗೂ ಕೆ.ಎ.ಎಸ್.ಗೆ ಕೋಚಿಂಗ್ ಗೆ ಧಾರವಾಡ, ಬೆಂಗಳೂರಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ ಹೀಗಾಗಿ ಇಲ್ಲೊಂದು ಐ.ಎ.ಎಸ್., ಕೆ.ಎ.ಎಸ್ ಕೋಚಿಂಗ್ ಅನುಷ್ಟಾನಗೊಳಿಸುವ ಚಿಂತನೆ ಇದೆ ಎಂದರು.
ಚಳಗೇರಾ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರದ ಪ್ರಧಾನ ಇಂಜಿನೀಯರ್ ಆಗಿ ನಿವೃತ್ತರಾಗಿರುವ ಪ್ರಭಾಕಾರ ಚಿಣಿ ಅವರಿಗೆ ಸಾಕಷ್ಟು ಅನುಭವವಿದ್ದು ಅವರ ರಚನಾತ್ಮಕ ಕಾರ್ಯಗಳ ಕನಸು ಸಾಕಾರಗೊಳ್ಳಲು ನಿವೃತ್ತ ಜೀವನದಲ್ಲಿನಿರ್ವಹಿಸುವ ಸಾದ್ಯತೆಗಳಿವೆ ಎಂದರು.
ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಕೃಷ್ಣಾ ಬಿ-ಸ್ಕಿಮ್ ಯೋಜನೆ ಬರೀ ಮಾತಾಗಿದ್ದು, ಈ ಯೋಜನೆ ರಾಷ್ತ್ರೀಯ ಯೋಜನೆಯಾದರೆ ಕೃಷ್ಣಾ ಕಣಿವೆಯ ಯೋಜನೆಗಳು ಸಂಪೂರ್ಣವಾಗಲು ಸಾದ್ಯವಿದೆ. ರಾಜಕೀಯ ಎಲ್ಲರೂ ಮಾಡುತ್ತಾರೆ ರಾಜಕೀಯದಲ್ಲಿ ಏನಾದರೂ ಸೇವೆ ಕುಷ್ಟಗಿ ತಾಲೂಕಿಗೆ ಆಗಬೇಕಿದ್ದು ಆ ನಿಟ್ಟಿನಲ್ಲಿ ನಿವೃತ್ತ ಪ್ರಧಾನ ಇಂಜಿನೀರ್ ಅವರಿಂದಾಗಬೇಕಿರುವುದು ಸ್ಥಳೀಯ ಅಭಿಮಾನಿಗಳ ಆಶಾಭಾವನೆಯಾಗಿದೆ ಎಂದರು.
ಚಂದಪ್ಪ ತಳವಾರ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಅರ್.ಡಿ.ಸಿ.ಸಿ. ಉಪಾಧ್ಯಕ್ಷ ಶಿವಶಂಕರಗೌಡ ಕಡೂರು, ಹೊಳೆಯಪ್ಪ ಕುರಿ, ಯಲ್ಲಪ್ಪ ಗದ್ದಿ, ಪರಶುರಾಮ ನಾಗರಾಳ, ಪ್ರಭುಶಂಕರಗೌಡ ಮಾಲಿಪಾಟೀಲ, ಮೈಲಾರಪ್ಪ ಮಂತ್ರಿ ಮತ್ತೀತರಿದ್ದರು.