Advertisement

C.M.ಇಬ್ರಾಹಿಂ ಭೇಟಿಯಾದ ಕತ್ತಿ, ಕೋರೆ :ಸಂಕ್ರಾಂತಿಗೆ ಜನತಾ ಪರಿವಾರಕ್ಕೆ ಒಗ್ಗಟ್ಟಿನ ಸುಗ್ಗಿ?

01:30 AM Dec 28, 2020 | sudhir |

ಬೆಂಗಳೂರು: ಸಂಕ್ರಾಂತಿಯ ಬಳಿಕ ರಾಜ್ಯ ರಾಜಕಾರಣದಲ್ಲಿ ಹೊಸ ಪರ್ವ ಆರಂಭವಾಗಲಿದೆ ಎಂಬ ಚರ್ಚೆಗೆ ಪೂರಕ ಎಂಬಂತಹ ಬೆಳವಣಿಗೆಗಳು ನಡೆಯುತ್ತಿವೆ.

Advertisement

ಬಿಜೆಪಿಯ ಬೆಳಗಾವಿ ಮೂಲದ ಹಿರಿಯ ನಾಯಕರಿಬ್ಬರು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಇಬ್ರಾಹಿಂ ತನ್ನನ್ನು ಕಾಂಗ್ರೆಸ್‌ನಲ್ಲಿ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದಕೊಂಡಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಇಬ್ರಾಹಿಂ ಅವರನ್ನು ಭೇಟಿ ಮಾಡಿದ್ದು, ತಮ್ಮ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ.

ಇದರ ನಡುವೆ ಬಿಜೆಪಿಯ ಹಿರಿಯ ನಾಯಕ ಉಮೇಶ್‌ ಕತ್ತಿ ಮತ್ತು ಪ್ರಭಾಕರ ಕೋರೆ ಅವರು ಇಬ್ರಾಹಿಂ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಹೊಸ ಲೆಕ್ಕಾಚಾರ ಗರಿಗೆದರುವಂತೆ ಮಾಡಿದೆ.

ಈಗಲೂ 1996ರ ಮಾದರಿಯಲ್ಲಿ ಒಕ್ಕಲಿಗ, ಲಿಂಗಾಯತ ಮತ್ತು ಮುಸ್ಲಿಂ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ಜನತಾ ಪರಿವಾರವನ್ನು ಒಗ್ಗೂಡಿಸುವ ಕುರಿತು ಗಂಭೀರ ಚಿಂತನೆ ನಡೆಯು ತ್ತಿದೆ ಎನ್ನಲಾಗಿದೆ. ಉಮೇಶ್‌ ಕತ್ತಿ, ಪ್ರಭಾಕರ ಕೋರೆ ಮತ್ತು ಇಬ್ರಾಹಿಂ ಭೇಟಿ ಇದಕ್ಕೆ ಪೂರಕವಾಗಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಸಿ.ಎಂ. ಇಬ್ರಾಹಿಂ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರು ಭೇಟಿಯಾದ ಅನಂತರ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿರುವ ಜನತಾ ಪರಿವಾರದ ನಾಯಕರು ಇಬ್ರಾಹಿಂ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದು, ಸೂಕ್ತ ಸಂದರ್ಭದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

1996ರ ಮಾದರಿ
1996ರಲ್ಲಿ ಜನತಾ ಪರಿವಾರ ಬಲಿಷ್ಠವಾಗಿದ್ದು, ಆಗ ರಾಜ್ಯದಿಂದ 16 ಸಂಸದರು ಆಯ್ಕೆಯಾಗಿದ್ದರು. ಆಗಿನ ಜನತಾದಳ ಪಕ್ಷದಲ್ಲಿ ಒಕ್ಕಲಿಗ, ಲಿಂಗಾಯತ ಮತ್ತು ಮುಸ್ಲಿಂ ಸಮುದಾಯದ ನಾಯಕರ ದೊಡ್ಡ ದಂಡೇ ಇತ್ತು.

ಆಗ ಜನತಾ ದಳದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಸ್‌.ಆರ್‌. ಬೊಮ್ಮಾಯಿ, ಎಂ.ಪಿ. ಪ್ರಕಾಶ್‌, ವಿ.ಎಸ್‌. ಕೌಜಲಗಿ, ವೈಜನಾಥ ಪಾಟೀಲ್‌ ಮುಂಚೂಣಿಯಲ್ಲಿದ್ದರು. ಒಕ್ಕಲಿಗ ಸಮುದಾಯದ ಎಚ್‌.ಡಿ. ದೇವೇ ಗೌಡ, ನಂಜೇಗೌಡ, ಬಿ.ಎನ್‌. ಬಚ್ಚೇಗೌಡ, ಬಿ.ಎಲ್‌. ಶಂಕರ್‌ ಅವರ ಮುಂದಾಳತ್ವವಿತ್ತು. ಮುಸ್ಲಿಂ ಸಮುದಾಯದಿಂದ ಅಬ್ದುಲ್‌ ನಜೀರ್‌ ಸಾಬ್‌, ಸಿ.ಎಂ. ಇಬ್ರಾಹಿಂ, ಖಮರುಲ್‌ ಇಸ್ಲಾಂ, ಮಿರಾಜುದ್ದೀನ್‌ ಪಟೇಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next