Advertisement

ಪ್ರಭಾಕರ ಆಚಾರ್ಯರ “ಧ್ವನಿ ಆ್ಯಂಡ್‌ ಎಪಿಫ‌ನಿ’ಕೃತಿ ಬಿಡುಗಡೆ

06:50 AM Mar 11, 2018 | |

ಉಡುಪಿ: ಮಣಿಪಾಲ ಯುನಿವರ್ಸಿಟಿ ಪ್ರಸ್‌ ಹೊರತಂದ 123ನೇ ಪುಸ್ತಕ ಆಂಗ್ಲ ಪ್ರಾಧ್ಯಾಪಕ ಪ್ರಭಾಕರ ಆಚಾರ್ಯ ಅವರ “ಧ್ವನಿ ಆ್ಯಂಡ್‌ ಎಪಿಫ‌ನಿ’ ಕೃತಿ ಮಾ. 10ರಂದು ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಲೋಕಾರ್ಪಣೆಗೊಂಡಿತು.

Advertisement

ಇದರಲ್ಲಿ  ಹನ್ನೆರಡು ಪ್ರಬಂಧಗಳಿವೆ. ಇವುಗಳ ಪೈಕಿ ಏಳು ಪ್ರಬಂಧ ಕವಿತೆಯ ಬಗ್ಗೆ, ಎರಡು ಕಲ್ಪಿತ ಕಥೆಗಳ ಬಗ್ಗೆ , ಮೂರು ಇತರ ವಿಷಯಗಳ ಆಧಾರವಾಗಿವೆ. ಡಿ.ಡಿ. ಕೋಸಂಬಿ ಅವರ ಮಿಥ್‌ ಆ್ಯಂಡ್‌ ರಿಯಾಲಿಟಿಯೂ ವಸ್ತುವಾಗಿ ಹೊರಹೊಮ್ಮಿದೆ ಎಂದು ಭಾಷಾ ತಜ್ಞ ಕೆ.ಪಿ. ರಾವ್‌ ಹೇಳಿದರು.

ಪ್ರಭಾಕರ ಆಚಾರ್ಯ ಅವರ ಎಲ್ಲ ಪ್ರಬಂಧಗಳಲ್ಲೂ ಅಂತರ್‌ ಸಂಬಂಧವಿದೆ. ಲಯಬದ್ಧವಾದ ಶ್ರುತಿ ಇದೆ. ವಿಚಾರ ವನ್ನು ಸ್ಪಷ್ಟವಾಗಿ ನಿರೂಪಿಸುವ ಅದಮ್ಯ ಶಕ್ತಿ ಇದೆ. ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಭುತ್ವ ಸಾಧಿಸಿದ ಕೃತಿಕಾರರ ನಿರೂಪಣೆ ಹೊಸತನವನ್ನು ಹುಡುಕುವ ಹಸಿವು ಕಾಣಿಸುತ್ತದೆ ಎಂದು ಮಣಿಪಾಲ ಎಂಸಿಪಿಎಚ್‌ನಲ್ಲಿರುವ ಕೆ.ಕೆ. ಹೆಬ್ಟಾರ್‌ ಕಲಾ ಗ್ಯಾಲರಿಯ ಕ್ಯುರೇಟರ್‌ ಸೃಜನಾ ಕಾಯ್ಕಿಣಿ ಹೇಳಿದರು. 

ಪ್ರೊ| ಪ್ರಭಾಕರ ಆಚಾರ್ಯ ಅವರ ಆಂಗ್ಲ ಬರಹಗಳು ಎಲ್ಲರಿಗೂ ಹೆಮ್ಮೆ ತಂದಿವೆ. ಭಾಷೆಯ ಮೇಲೆ  ಅಪಾರ ಹಿಡಿತ ಹೊಂದಿದ್ದ ಅವರ ಪ್ರಬಂಧಗಳು ಅನೇಕರಿಗೆ ಪ್ರೇರಣೆ ನೀಡಿವೆ  ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಸಂಧ್ಯಾ ನಂಬಿಯಾರ್‌ ಹೇಳಿದರು. ಮಣಿಪಾಲ ವಿ.ವಿ. ಪ್ರಕಾಶನದ ಗ್ರೇಸಿ ಸಂಝಾತ್ಸಮ್‌ ಸ್ವಾಗತಿಸಿ, ಸೋಹಿನಿ ರಾಜ್ಯಂಗ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next