ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ 8 ವಿಕೆಟ್‌ಗಳ ಜಯಗಳಿಸಿತು.
Advertisement
ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಪೇರಿ ಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತ, 18.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಗೆಲುವಿನ ಗುರಿ ಮುಟ್ಟಿತು.
Related Articles
ಮೊದ ಲಿಗೆ ಟಾಸ್ ಗೆದ್ದಿದ್ದ ಭಾರತ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ್ದರಿಂದಾಗಿ ಇಂಗ್ಲೆಂಡ್‌ಗೆ ಮೊದಲು ಬ್ಯಾಟಿಂಗ್‌ಗೆ ಇಳಿಯುವ ಅವ ಕಾಶ ಸಿಕ್ಕಿತು. ಆರಂಭಿ ಕ ರಾದ ಜೇಸನ್ ರಾಯ್, ಜೋ ಬಟ್ಲರ್ ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್ ಮನ್ ಸಹ ಗಟ್ಟಿ ಯಾಗಿ ನಿಲ್ಲ ಲಿಲ್ಲ. ಮಧ್ಯಮ ಕ್ರಮಾಂಕ ವಂತೂ ಕುಲ ದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿತು.
Advertisement
ಕುಲ ದೀಪ್ ಯಾದವ್ 5 ವಿಕೆಟ್ (ಬಟ್ಲರ್,ಹೇಲ್ಸ್, ಮಾರ್ಗನ್, ಬೇರ್‌ಸ್ಟೋ, ರೂಟ್) ಪಡೆದರೆ,ವೇಗಿಗಳಾದ ಉಮೇಶ್ ಯಾದವ್ 2(ರಾಯ್,ಜೋರ್ಡನ್) ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ (ಮೊಯೀನ್ ಅಲಿ) ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 20 ಓವ ರ್‌ಗೆ 159/8 (ಜಾಸ್ ಬಟ್ಲರ್ 69, ಜೇಸನ್ ರಾಯ್ 30, ಕುಲದೀಪ್ 24ಕ್ಕೆ 5), ಭಾರತ 18.2 ಓವ ರ್‌ಗೆ 163/2 (ಕೆ.ಎಲ್. ರಾಹುಲ್ 101*, ರೋಹಿತ್ 32, ರಶೀದ್ 25ಕ್ಕೆ 1).
ಕೊಹ್ಲಿ ವಿಶ್ವ ದಾಖಲೆಭಾರತ ನಾಯಕ ವಿರಾಟ್ ಕೊಹ್ಲಿ (20*ರನ್)ಟಿ20 ಮಾದ ರಿ ಯಲ್ಲಿ ವೇಗವಾಗಿ 2000 ರನ್ ಗಡಿ ದಾಟಿದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. ಈವರೆಗೆ ನ್ಯೂಜಿ ಲೆಂಡ್‌ನ ಮಾರ್ಟಿನ್ ಗುಪ್ಟಿಲ್ (73 ಇನಿಂಗ್ಸ್), ಬ್ರೆಂಡನ್ ಮೆಕ ಲಂ (70) ಇತ್ತೀಚೆಗೆ ಶೋಯೆಬ್ ಮಲಿಕ್ (93) 2000 ರನ್ ಗಡಿ ದಾಟಿದ್ದಾರೆ. ಆದರೆ, ಕೊಹ್ಲಿ 56 ಇನಿಂಗ್ಸ್‌ಗಳಿಂದ ಕೊಹ್ಲಿ ಈ ಸಾಧನೆ ಮಾಡಿ ಅತಿ ವೇಗವಾಗಿ 2000 ರನ್ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರರಾಗಿ ದ್ದಾರೆ.