ಇಸ್ಲಾಮಾಬಾದ್: ಆರ್ಥಿಕ ದಿವಾಳಿಯೆ ದ್ದಿರುವ ಶ್ರೀಲಂಕಾದಲ್ಲಿ ವಿದ್ಯುತ್ ಉತ್ಪಾದನೆಗೂ ಇಂಧನವಿಲ್ಲದಂತಾಗಿ ಅಲ್ಲಿ ವಿದ್ಯುತ್ ನಿಲುಗಡೆ ಜಾರಿಗೆ ಬಂದಿದೆ.
ಈಗ ಮತ್ತೊಂದು ನೆರೆಯ ದೇಶವಾದ ಪಾಕಿಸ್ಥಾನ ಕೂಡ ಇದೇ ಹಾದಿಯನ್ನು ಹಿಡಿಯಲಾರಂಭಿಸಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ಥಾನಕ್ಕೆ ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿ ಬೇಕಿರುವ ಕಲ್ಲಿದ್ದಲು, ನೈಸರ್ಗಿಕ ಅನಿಲಗಳನ್ನೂ ಕೊಳ್ಳಲು ಶಕ್ತಿಯಿಲ್ಲದಂತಾಗಿದ್ದು, ಹಾಗಾಗಿ ಹಲವಾರು ಊರುಗಳಲ್ಲಿ ವಿದ್ಯುತ್ ಕಡಿತ ಜಾರಿಗೆ ತರಲಾಗಿದೆ.
ಇದನ್ನೂ ಓದಿ:ಕೆಜಿಎಫ್ 2 ಚಿತ್ರ ಪ್ರದರ್ಶನದ ವೇಳೆ ಗುಂಡಿನ ದಾಳಿ : ವ್ಯಕ್ತಿ ಗಂಭೀರ, ಪೊಲೀಸರಿಂದ ಪರಿಶೀಲನೆ
ಎ. 13ರಂದು ಪಾಕಿಸ್ಥಾನದಲ್ಲಿ 3,500 ಮೆಗಾ ವ್ಯಾಟ್‌ನಷ್ಟು ವಿದ್ಯುತ್ತನ್ನು ಉಳಿಸಲು ವಿದ್ಯುತ್ ಕಡಿತಕ್ಕೆ ಸೂಚಿಸಲಾಗಿತ್ತೆಂದು ಅಲ್ಲಿನ ಇಂಧನ ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ.