ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಾಲಯ, ಮುಖ್ಯಮಂತ್ರಿಗಳ ನಿವಾಸವಿರುವ ನಗರ ಸೇರಿ ರಾಷ್ಟ್ರರಾಜಧಾನಿಯ ಬಹುತೇಕ ನಗರಗ ಳಲ್ಲಿ ಮಂಗಳವಾರ ಮಧ್ಯಾಹ್ನದಿಂದಲೂ ವಿದ್ಯುತ್ ಕಡಿತಗೊಂಡಿದೆ. ಉತ್ತರ ಪ್ರದೇಶದ ಮಂಡೋಲಾ ದಲ್ಲಿರುವ ಪವರ್‌ಗ್ರಿಡ್‌ನ ಸಬ್‌ಸ್ಟೇಷನ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಪರಿಸ್ಥಿತಿ ಏರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀ ನಗರ, ಲಜಪತ್ ನಗರ, ಜಾಮೀಯಾ, ರೋಹಿಣಿ ಗೋಪಾಲ ಪುರ ಸೇರಿೆ ಕೇಂದ್ರ, ಪೂರ್ವ ಮತ್ತು ಉತ್ತರ ದೆಹಲಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗವ ರ್ನರ್ ಮತ್ತು ಸಿಎಂ ನಿವಾಸಕ್ಕೂ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀರಿನ ಅಭಾವಕ್ಕೆ ಹರ್ಯಾಣ ಸರ್ಕಾರ ಕಾರಣ: ಆತಿಷಿ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ದೆಹಲಿ ಜಲಸಚಿವೆ ಅತಿಷಿ ಹರ್ಯಾಣ ಸರ್ಕಾರವನ್ನು ದೂರಿದ್ದಾರೆ. ಹರ್ಯಾಣ ಸರ್ಕಾರ ಉದ್ದೇಶಪೂರ್ವಕವಾಗಿ ಹಾಗೂ ಕಾನೂನುಬಾಹಿರವಾಗಿ ದೆಹಲಿಗೆ ನೀರಿನ ಸರಬರಾಜು ಆಗದಂತೆ ತಡೆದಿದೆ ಎಂದು ಆರೋಪಿಸಿದ್ದಾರೆ.