Advertisement

ಯುವ ಸಂಘಟನೆಯಿಂದ ಸಮಾಜಕ್ಕೆ ಶಕ್ತಿ: ಶರಣು

12:06 PM Dec 23, 2021 | Team Udayavani |

ಚಿತ್ತಾಪುರ: ಪ್ರತಿಯೊಬ್ಬ ಯುವಕರು ಸಂಘ ಟಿತರಾಗಿ ಹೋರಾಟ ಮಾಡಿದಾಗ ಸಮಾಜ ಬಲಿಷ್ಠವಾಗುತ್ತದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ ಹೇಳಿದರು.

Advertisement

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಸಮಾಜದ ಸದಸ್ಯತ್ವ ಅಭಿಯಾನ, ತಾಲೂಕು ವೀರಶೈವ ಸಮಾಜ ಯುವ ಘಟಕದ ಅಧ್ಯಕ್ಷರ ಆಯ್ಕೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಯುವಕರ ಸಂಘಟನೆ ಅಗತ್ಯವಾಗಿದ್ದರಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದರು.

ಕಲಬುರಗಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗಾಗಿ ವಸತಿ ನಿಲಯ ಆರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಣದ ವ್ಯಾಸಂಗಕ್ಕಾಗಿ ಮಹಿಳೆಯರಿಗೆ ಉಚಿತ ವಸತಿ ನೀಡಲು ಚಿಂತನೆ ಮಾಡಲಾಗಿದೆ. ರಾಜಕೀಯ ರಹಿತವಾಗಿ ಸಮಾಜದಲ್ಲಿ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು ಎಂದರು.

ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಸಮಾಜದಲ್ಲಿನ ಕಟ್ಟಕಡೆಯ ಮನುಷ್ಯನಿಗೆ ಅನ್ಯಾಯವಾದಾಗಲೂ ಸಮಾಜದ ಎಲ್ಲರೂ ಸೇರಿ ಪ್ರತಿಭಟನೆ ಮಾಡಿ ನ್ಯಾಯ ದೊರಕಿಸಬೇಕು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲ್‌ ಪುರಕರ್‌, ಯುವ ಪ್ರಧಾನ ಕಾರ್ಯದರ್ಶಿ ಶಾಂತರೆಡ್ಡಿ ಪೇಠಶಿರೂರ, ತಾಲೂಕು ಯುವ ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಮಲ್ಲಿನಾಥಗೌಡ ಸನ್ನತಿ ಮಾತನಾಡಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಶಿವರಾವ್‌ ಪಾಟೀಲ ಬೆಳಗುಂಪಾ, ಮುಖಂಡರಾದ ಮಲ್ಲಣ್ಣ ಮಾಸ್ತರ, ಶಿವರಾಜ ಪಾಟೀಲ ತಿಳಿಗೋಳ, ಚಂದ್ರಶೇಖರ ತೆಂಗಳಿ, ಶಿವರಾಜ ಪಾಟೀಲ ತುನ್ನೂರ್‌, ಶರಣು ತೆಂಗಳಿ, ಭೀಮಾಶಂಕರ ಮೇಟಿಕರ, ವೀರಣ್ಣ ಸುಲ್ತಾನಪುರ್‌, ವಿಶ್ವನಾಥ ಪಾಟೀಲ ಅಲ್ಲೂರ್‌, ವಿಶ್ವನಾಥರೆಡ್ಡಿ ಕರದಾಳ, ನಿಹಾಲ ಪಾಟೀಲ, ಕೋಟೇಶ್ವರ ರೇಷ್ಮಿ, ಅಶೋಕ ನಿಪ್ಪಾಣಿ, ಅನಿಲ ಬೊಮ್ಮನಳ್ಳಿ, ಶಿವರೆಡ್ಡಿ ಪಾಲಪ್‌, ಮಲ್ಲು ಇಂದೂರ, ವೀರಣ್ಣ ಯಾರಿ, ರಾಚಣ್ಣ ಬೊಮನಳ್ಳಿ, ಆನಂದ ನರಬೋಳಿ, ಬಸವಂತರಾಯ ಪಾಟೀಲ, ಶ್ರೀನಿವಾಸರೆಡ್ಡಿ ಪಾಲಪ್‌, ಶಿವರಾಜ ಪಾಳೇದ್‌, ರಮೇಶ ಬೊಮ್ಮನಳ್ಳಿ ಇದ್ದರು. ಅಂಬರೀಶ ಸುಲೇಗಾಂವ ಸ್ವಾಗತಿಸಿದರು, ಜಿಲ್ಲಾ ಯುವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್‌ ನಿರೂಪಿಸಿದರು, ಚನ್ನವೀರ ಕಣಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next