Advertisement

ವಿದ್ಯುತ್‌ ಬಳಕೆ: ನಿಯಮ ಬದಲಾವಣೆ

12:09 PM Mar 06, 2017 | |

ಮಂಗಳೂರು: ವಿದ್ಯುತ್‌ ಬಳಕೆಗೆ ಸಂಬಂಧಿಸಿ ವಾಣಿಜ್ಯ ಬಳಕೆ ಪಾಲು ಒಟ್ಟು ವಿದ್ಯುತ್‌ ಬಳಕೆಯ ಶೇ. 25ಕ್ಕಿಂತ ಹೆಚ್ಚುವರಿ ಇದ್ದರೆ ಅದರಲ್ಲಿ ಗೃಹ ಬಳಕೆಯ ಪಾಲು ಎಷ್ಟೇ ಇದ್ದರೂ ಅದನ್ನು ಪರಿಗಣಿಸದೆ ವಾಣಿಜ್ಯ ದರವನ್ನೇ ವಿಧಿಸುವ ನಿಯಮಕ್ಕೆ ಸರಕಾರ ತಿದ್ದುಪಡಿ ತಂದಿದೆ.

Advertisement

ಅದರಂತೆ ಕಟ್ಟಡವೊಂದರಲ್ಲಿ ವಸತಿ ಮತ್ತು ವಾಣಿಜ್ಯ ಬಳಕೆ ಕೊಠಡಿಗಳೆರಡೂ ಇದ್ದು, ವಿದ್ಯುತ್‌ ಬಳಕೆಯಲ್ಲಿ ಶೇ. 25ಕ್ಕಿಂತ ಹೆಚ್ಚಿನ ಪಾಲು ವಾಣಿಜ್ಯ ಉದ್ದೇಶದ ವ್ಯವಸ್ಥೆಗೆ ವಿನಿಯೋಗವಾಗುತ್ತಿದ್ದರೆ ಮತ್ತು ಪಾರ್ಕಿಂಗ್‌ ಲೈಟ್‌, ಲಿಫ್ಟ್‌, ನೀರಿನ ಪಂಪ್‌ ಸಂಪೂರ್ಣವಾಗಿ ವಾಸ್ತವ್ಯದ ವ್ಯವಸ್ಥೆಗೆ ಬಳಕೆಯಾಗಿದ್ದರೆ ವಿದ್ಯುತ್‌ ದರಕ್ಕೆ ಸಂಬಂಧಿಸಿ ವಸತಿ ದರ ವಿಧಿಸಲಾಗುವುದು. ಈ ಹಿಂದೆ ಅದಕ್ಕೆ ವಾಣಿಜ್ಯ ದರ ವಿಧಿಸಲಾಗುತ್ತಿತ್ತು. ಈ ಬಗ್ಗೆ ಕಳೆದ 2016 ನವೆಂಬರ್‌ ತಿಂಗಳ ರಾಜ್ಯ ಪತ್ರದಲ್ಲಿ ತಿದ್ದುಪಡಿ ಬಗ್ಗೆ ಪ್ರಕಟನೆ ಹೊರಡಿಸಲಾಗಿದೆ.

ವಸತಿ ಮತ್ತು ವಾಣಿಜ್ಯ ವ್ಯವಸ್ಥೆಗಳೆರಡೂ ಒಂದೇ ಕಟ್ಟಡದಲ್ಲಿದ್ದು, ವಾಣಿಜ್ಯದ ಉಪಯೋಗ ಶೇ. 25 ಮೀರಿದಲ್ಲಿ ವಸತಿಗೆ ಮಾತ್ರ ಉಪಯೋಗವಾಗುವ ವಿದ್ಯುತ್‌ಗೆ ವಾಣಿಜ್ಯ ದರ ನಿಗದ ಪಡಿಸುತ್ತಿರುವುದನ್ನು ಪ್ರಶ್ನಿಸಿ ಮಂಗಳೂರಿನ ಮಾಜಿ ಕಾರ್ಪೊರೇಟರ್‌ ಜಪ್ಪು ಮಾರ್ಕೆಟ್‌ನ ಜೆ.ವಿ. ಡಿ’ಮೆಲ್ಲೊ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಅಪೀಲು ಅರ್ಜಿಯಾಗಿ ಪರಿಗಣಿಸಿ ಆಯೋಗ ಈ ಹಿಂದಿನ ನಿಯಮಕ್ಕೆ ತಿದ್ದುಪಡಿ ತಂದಿದೆ. ಇದು ರಾಜ್ಯದ ಎಲ್ಲ ಎಸ್ಕಾಂಗಳಿಗೆ ಅನ್ವಯವಾಗುತ್ತದೆ ಎಂದು ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next