Advertisement

ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ : ಮಹಾ ಆಶ್ಲೇಷಾ ಬಲಿ

04:48 PM Mar 31, 2017 | |

ಮುಂಬಯಿ: ಪೊವಾಯಿ ಪಂಚ ಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದಲ್ಲಿ ಮಾ. 18 ಮತ್ತು ಮಾ. 19ರಂದು ಶ್ರೀಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರ ಮುಂದಾಳತ್ವದಲ್ಲಿ ಶ್ರೀ ನಾಗದೇವರಿಗೆ ಮಹಾ ಆಶ್ಲೇಷಾ ಬಲಿ ಹಾಗೂ ಒಂದು ಸಾವಿರ ಸೀಯಾಳಾಭಿಷೇಕ, ವಿಶೇಷ ಮಹಾಪೂಜೆ ನಡೆಯಿತು.

Advertisement

ಮಾ. 18 ರಂದು ಪ್ರಾರಂಭದ ದಿನ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಮಹಾಪೂಜೆ, ರಕ್ತೇಶ್ವರಿ ದೇವಿ ಮತ್ತು ಮಹಾಕಾಳಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಶ್ರೀ ಮಹಾಶೇಷ ರುಂಡಮಾಲಿನಿ ದೇವಿಯ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಮಂಡಲ ಹೋಮ, ವಿಶೇಷ ಮಹಾಪೂಜೆ, ಕ್ಷೇತ್ರದ ಶಾಂತಿ ಪೂಜೆ, ಶುದ್ಧೀಕರಣ ಪೂಜೆ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ಮಂಡಲದೊಂದಿಗೆ ಹೋಮ-ಹವನಗಳನ್ನು ಆಯೋ ಜಿಸಲಾಗಿತ್ತು. ಶ್ರೀ ದೇವಿಗೆ ದುರ್ಗಾ ನಮಸ್ಕಾರ ಪೂಜೆ ಜರಗಿತು.

ಮಾ. 19 ರಂದು ಒಂದು ಸಾವಿರ ತೆಂಗಿನಕಾಯಿಯ ಮಹಾ ಚಂಡಿಕಾಯಾಗವು ದೇವಿಯ ಸನ್ನಿಧಿಯಲ್ಲಿ ನಡೆಯಿತು. ಊರಿನಿಂದ ಆಗಮಿಸಿದ 11 ಪುರೋಹಿತರ ಬಳಗದಿಂದ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಶ್ರೀ ದೇವಿಗೆ ವಿಶೇಷ ಪೂಜೆಯ ಬಳಿಕ ಶ್ರೀ ದೇವಿಯ ಆವೇಶ ನಡೆಯಿತು. ತೀರ್ಥ ಪ್ರಸಾದ ವಿತರಣೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಜಗದೀಶ್‌ ಸುವರ್ಣ, ರಾಹುಲ್‌ ಸುವರ್ಣ, ಸಂತೋಷ್‌ ಸುವರ್ಣ, ಕೇಶವ ಅಂಚನ್‌, ಸುಧಾಕರ ಜಿ. ಪೂಜಾರಿ, ನ್ಯಾಯವಾದಿ ರವಿ ಕೋಟ್ಯಾನ್‌ ಹಾಗೂ ಕಾರ್ಯಕರ್ತರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next