Advertisement

Police: ನ.19ಕ್ಕೆ ಕಾನ್‌ಸ್ಟೇಬಲ್‌ ಲಿಖಿತ ಪರೀಕ್ಷೆ ಮುಂದೂಡಿಕೆ

10:40 PM Oct 26, 2023 | Team Udayavani |

ಬೆಂಗಳೂರು: ಮುಂದಿನ ತಿಂಗಳ 5ರಂದು ನಿಗದಿಯಾಗಿದ್ದ ಕಲ್ಯಾಣ ಕರ್ನಾಟಕ ಪೊಲೀಸ್‌ ಕಾನ್‌ಸ್ಟೇಬಲ್‌ (ಸಿವಿಲ್‌) (ಪುರುಷ ಮತ್ತು ಮಹಿಳಾ) (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು 454 ಬ್ಯಾಕ್‌ಲಾಗ್‌ ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಲಾಗಿದೆ. ನ.19ಕ್ಕೆ ಹೊಸ ದಿನಾಂಕ ನಿಗದಿ ಮಾಡಲಾಗಿದೆ.

Advertisement

ನ.5ರಂದು ಇತರ ಇಲಾಖೆಗಳ ಲಿಖಿತ ಪರೀಕ್ಷೆ ನಿಗದಿಯಾಗಿದೆ. ಹೀಗಾಗಿ, ಈಗಾಗಲೇ ತಮ್ಮ ಘಟಕಗಳಿಂದ ಪರೀಕ್ಷೆ ನಡೆಸಲು ಕೇಂದ್ರಗಳ ವಿವರಗಳನ್ನು ಸಲ್ಲಿಸಲಾಗಿದೆ. ಕೇಂದ್ರಗಳಲ್ಲಿಯೇ ಅಥವಾ ಇನ್ನಿತರೆ ಹೊಸ ಕೇಂದ್ರಗಳಲ್ಲಿ(ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ) ನ.19ರಂದು ಪರೀಕ್ಷೆಯನ್ನು ನಡೆಸಲು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಲಿಖೀತ ಒಪ್ಪಿಗೆ ಪತ್ರವನ್ನು ಪಡೆದು, ಅದರ ಮಾಹಿತಿಯನ್ನು ಅ.30ರ ಬೆಳಗ್ಗೆ 10.30ರೊಳಗಾಗಿ ಇ-ಮೇಲ್‌ ssrnt@ksp.gov.in ಗೆ ಕಳುಹಿಸಿಕೊಡಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next