Advertisement

ಕೋವಿಡ್‌ 19 ತಡೆ ಮಾಹಿತಿಗೆ ಭಿತ್ತಿಪತ್ರ

05:26 AM May 16, 2020 | Lakshmi GovindaRaj |

ಚಾಮರಾಜನಗರ: ಜಿಲ್ಲಾಡಳಿತ ಕೋವಿಡ್‌-19 ವೈರಾಣು ತಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಯೋಜನೆಗಳ ಮಾಹಿತಿ ಭಿತ್ತಿ ಪತ್ರವನ್ನು ಜಿಲ್ಲಾ ಧಿಕಾರಿ ಡಾ. ಎಂ.ಆರ್‌.ರವಿ ಬಿಡುಗಡೆ ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿ  ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಪಂ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಅಧಿಕಾರಿ ಕಚೇರಿ, ಭಾರತೀಯ  ರೆಡ್‌ ಕ್ರಾಸ್‌ ಸಂಸ್ಥೆ, ಚಾಮರಾಜನಗರ ಶಾಖೆ ಸಹ ಯೋಗದಲ್ಲಿ ರೂಪಿಸಿರುವ ಆರೋಗ್ಯ ಸಂಬಂಧಿ ಮಾಹಿತಿಯನ್ನು ಪ್ರಚುರ ಪಡಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

ಆರೋಗ್ಯ ಸೇತು ಆ್ಯಪ್‌, ಔಷಧ ಮಿತ್ರ, ಆಯುಷ್‌ ಪದ್ಧತಿಯಿಂದ  ವೈರಾಣು ತಡೆ ಗಟ್ಟುವ ವಿಧಾನ, ಹಿರಿಯ ನಾಗರಿಕರ, ಮಹಿಳೆ ಯರ, ಮಂಗಳಮುಖೀ ಯರ ಕೌಟುಂಬಿಕ ಹಾಗೂ ಮಾನಸಿಕ ಒತ್ತಡಗಳ ನಿವಾರಣೆಯ ಆಸರೆ ಸಹಾಯವಾಣಿಗಳ ಸಮಗ್ರ ಮಾಹಿತಿ  ಯನ್ನು ಭಿತ್ತಿಪತ್ರದಲ್ಲಿ ಅಳವಡಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಮಾತ ನಾಡಿ, ಜಿಲ್ಲೆಯ ಜನತೆಗೆ ಆರೋಗ್ಯ ಪೂರಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡ ಲಾಗುತ್ತಿದೆ ಎಂದರು. ಈ ವೇಳೆ  ಡಾ.ಮಹೇಶ್‌, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌, ಜಿಲ್ಲಾ ಕಾರ್ಮಿಕಾಧಿಕಾರಿ ಮಹದೇವಯ್ಯ, ನಿರೀಕ್ಷಕಿ ಗೀತಾ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ ಮಹೇಶ್‌, ಡಾ.ಗಿರೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next