Advertisement

ಸರ್‌ಎಂವಿ ಪ್ರತಿಮೆ ಸ್ಥಾಪನೆಗಾಗಿ ಅಂಚೆ ಚಳವಳಿ

12:38 PM Sep 06, 2017 | Team Udayavani |

ಮೈಸೂರು: ನಗರದ ಸಯ್ನಾಜಿರಾವ್‌ ರಸ್ತೆಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಮಂಗಳವಾರ ನಗರದಲ್ಲಿ ಅಂಚೆ ಚಳವಳಿ ನಡೆಸಲಾಯಿತು.

Advertisement

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಅಂಚೆ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಬಳಗದ ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ರಾಜ್ಯಸರ್ಕಾರಕ್ಕೆ ಪತ್ರ ರವಾನಿಸಿದರು.

ಬಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ದಿವಾನರಾಗಿ ಅನೇಕ ಕೊಡುಗೆ ನೀಡಿದ್ದಾರೆ. ಶಿಕ್ಷಣ, ನೀರಾವರಿ, ಸಹಕಾರಿ, ವಾಣಿಜ್ಯ, ಕೈಗಾರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವಿಶ್ವೇಶ್ವರಯ್ಯ ನೀಡಿರುವ ಕೊಡುಗೆ ಇಂದಿನ ಸರ್ಕಾರಗಳಿಗೆ ಮಾದರಿಯಾಗಿದೆ.

ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಹಾಗೂ ಭಾರತರತ್ನ ಪ್ರಶಸ್ತಿ ಜತೆಗೆ ಬ್ರಿಟೀಷ್‌ ಸರ್ಕಾರದಿಂದ ಸರ್‌ ಪದವಿ ಪಡೆದಿರುವ ವಿಶ್ವೇಶ್ವರಯ್ಯ ಅವರನ್ನು ಇಂದಿನ ಸರ್ಕಾರಗಳು ಕನಿಷ್ಠ ಗೌರವ ನೀಡದಿರುವುದು ಬೇಸರದ ಸಂಗತಿಯಾಗಿದೆ ಈ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಅವರನ್ನು ಗೌರವಿಸುವ ಉದ್ದೇಶದಿಂದ ಸಾರ್ವಜನಿಕ ಸಹಬಾಗಿತ್ವದಲ್ಲಿ ಸರ್ಕಾರ ವಿಶ್ವೇರಯ್ಯನವರ ಪ್ರತಿಮೆ ಸ್ಥಾಪಿಸಬೇಕು ಮತ್ತು ಸೆ.15 ರಂದು ಜಿಲ್ಲಾಡಳಿತದಿಂದ ವಿಶ್ವೇಶ್ವರಯ್ಯನವರ ಜಯಂತಿ ಆಚರಿಸಬೇಕೆಂದು ಒತ್ತಾಯಿಸಿದರು.

ಸಮಾಜ ಸೇವಕ ಡಿ.ಟಿ.ಪ್ರಕಾಶ್‌, ಮೈ.ಕಾ. ಪ್ರೇಮಕುಮಾರ್‌, ಮುಳ್ಳೂರು ಗುರುಪ್ರಸಾದ್‌, ಜೋಗಿ ಮಂಜು, ಅಭಿಮಾನಿಗಳ ಸಂಘದ ಅಜಯ್‌ ಶಾಸಿ ವಿಕ್ರಮ್‌ ಅಯ್ಯಂಗಾರ್‌, ಕುಮಾರ್‌ಗೌಡ, ಜಯಸಿಂಹ, ಸಂದೇಶ್‌, ರಂಗನಾಥ್‌, ಶ್ರೀನಿಧಿ ವಸಿಷ್ಠ, ಅನುಷ್‌, ತೇಜಸ್‌, ರಾಜಗೋಪಾಲ್‌, ಪಡುವಾರಹಳ್ಳಿ ರಾಜೇಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next