ಮುಳ್ಳೇರಿಯ: ಕಾಸರಗೋಡು ಜಿಲ್ಲೆಯ ಬೆಳ್ಳೂರು ಪಂಚಾಯಿತ್ ತೋಟದಮೂಲೆ ಎಸ್ ಸಿ ಕಾಲನಿಯ ಸೀತು (66)ಅವರನ್ನು ಕರುಳು ಸಂಬಂ ಸಿದ ಅಸೌಖ್ಯದಿಂದ ಪೆರಿಯಾರಂವೈದ್ಯಕೀಯ ಕಾಲೇಜ್‌ನಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ಮರಳಿ ಮನೆಗೆ ಕರೆ ತರಲಾಗಿತ್ತು. ಆ್ಯಂಬುಲೆನ್ಸ್ ಸಾಗುವ ರಸ್ತೆ ಇರದ ಕಾರಣ ರಾತ್ರಿ 8ರ ಬಳಿಕ ಅರ್ಧ ಕಿ.ಮೀ.ನಷ್ಟು ದೂರ ಸ್ಥಳೀಯರು ಹೊತ್ತಯ್ಯ ಬೇಕಾಗಿ ಬಂದ ದಾರುಣ ಘಟನೆ ಸಂಭವಿಸಿತು.
ಹಣವಿಲ್ಲದ ಕಾರಣ ಒಡಿಶಾದಲ್ಲಿ ತಂದೆ-ತಾಯಿ ತಮ್ಮ ಪುತ್ರಿಯ ಮೃತದೇಹವನ್ನು ರುಧ್ರಭೂಮಿಗೆ ಸುಮಾರು 10 ಕಿ.ಮೀ. ಹೊತ್ತು ಕೊಂಡೇ ಸಾಗಿ ಅಂತ್ಯ ಸಂಸ್ಕಾರ ನಡೆಸಿದ ಸುದ್ದಿ ಮಾಸುವ ಮುನ್ನವೇ ಅಂಥದ್ದೇ ಮನ ಕಲುಕುವ ಘಟನೆ ಕಾಸರಗೋಡು ಜಿಲ್ಲೆಯಲ್ಲೂ ನಡೆದಿದೆ
ಎಂಡೋಸಲಾನ್ ರೋಗ ಬಾತರ ಉಚಿತ ಚಿಕಿತ್ಸೆಗೆ ಅರ್ಹತೆ ಲಭಿಸಿದ ಸೀತು ವಾಸಿಸುವ ಕಾಲನಿಯಲ್ಲಿ ಎಪ್ಪತ್ತಕ್ಕೂ ಅಧಿಕ ಎಸ್‌ಸಿ ಕುಟುಂಬಗಳಿದ್ದು ನೂರೈವತ್ತಕ್ಕೂ ಹೆಚ್ಚು ಮನೆಗಳಿವೆ . ಈ ಕಾಲನಿಗೆ ರಸ್ತೆ ಸಂಪರ್ಕ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ತಿಂಗಳುಗಳ ಮೊದಲು ಹಾವಿನ ಕಡಿತಕ್ಕೊಳಗಾಗಿ 28 ವರ್ಷ ಪ್ರಾಯದ ರವಿ ಎಂಬ ಯುವಕ ಸೂಕ್ತ ಸಮಯದಲ್ಲಿ ಶುಶ್ರೂಷೆ ಸಿಗದೆ ಅಸುನೀಗಿದ ಘಟನೆಯೂ ನಡೆದಿದೆ.
ಅಲ್ಲದೆ ದೇಹ ಕ್ಷೀಣತೆಗೊಳಗಾಗಿ ಮತ್ತಾಡಿ ಎಂಬವರೂ ಮರಣವನ್ನಪ್ಪಿದ್ದು ಅವರ ಮೃತ ದೇಹವನ್ನೂ ಹೊತ್ತು ಸಾಗಿಸಲಾಗಿತ್ತು ಮಂಗಳವಾರ ಜಿಲ್ಲಾ ಕಾರಿಗಳ ನಿರ್ದೇದಂತೆ ಆರ್‌ಡಿಓ ಅಬ್ದುಲ್ ಸಮದ್ ಭೇಟಿ ಕೊಟ್ಟಿದ್ದು ಮಾಹಿತಿ ಪಡೆದಿದ್ದಾರೆ ಅಲ್ಲದೆ ಬುಧವಾರ ಖುದ್ದು ಜಿಲ್ಲಾ ಧಿಕಾರಿಯವರು ಆಗಮಿಸಿದ್ದು, ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಹಾಗೂ ಕಾಲನಿ ನಿವಾಸಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದಾರೆ.