Advertisement
ಬೆಂಗಳೂರಿನ ಜೆಎಂಎಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸಿದ ಬಯೋ ಗ್ಯಾಸ್ ಘಟಕವನ್ನಿಟ್ಟು ಅದರಲ್ಲಿ ಹಸಿ ಆಹಾರ ತ್ಯಾಜ್ಯವನ್ನು ಹಾಕಿ ಅನಿಲ ಉತ್ಪಾದನೆಯ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಹೋಟೆಲ್, ರೆಸಾರ್ಟ್, ಹಾಸ್ಟೆಲ್‌ಗಳು, ದೊಡ್ಡ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವ ಅಡುಗೆ ಘಟಕಗಳಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಪ್ರತಿ ದಿನ ಆಹಾರ ತ್ಯಾಜ್ಯವನ್ನು ಹಾಕಿದರೆ ಇದರಿಂದ ಅಡುಗೆ ಅನಿಲ ಪಡೆದುಕೊಳ್ಳಬಹುದಾಗಿದೆ.
Related Articles
ಚಿಟಗುಪ್ಪಿ ಆಸ್ಪತ್ರೆಯ ರೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಸ್ಪತ್ರೆ ಸಮೀಪ ಸ್ಥಾಪಿಸಲಾಗಿದೆ. ಅನಿಲ ಒಲೆ ಜೋಡಿಸಿ ಅಲ್ಲಿ ನೀರು ಕಾಯಿಸಲಾಗುತ್ತದೆ. ಅಲ್ಲಿ ಪ್ರತಿದಿನ ಸುಮಾರು 30 ಬಾಣಂತಿಯರಿಗೆ ಸ್ನಾನಕ್ಕಾಗಿ ಹಾಗೂ ಕುಡಿಯಲು ಬಿಸಿ ನೀರು ಒದಗಿಸುವುದು ಉದ್ದೇಶವಾಗಿದೆ. ಘಟಕ ನಿರಂತರವಾಗಿ ಅಲ್ಲಿ ಕಾರ್ಯನಿರ್ವಹಿಸಲಿದೆ.
Advertisement
30 ದಿನಗಳಲ್ಲಿ ಎರಡು ಸಿಲಿಂಡರ್ ಗ್ಯಾಸ್!ಸದ್ಯ ಪ್ರದರ್ಶಿಸಲಾಗುತ್ತಿರುವ ಘಟಕ 3 ಕ್ಯುಬಿಕ್ ಮೀಟರ್ ಸಾಮರ್ಥ್ಯ ಹೊಂದಿದ್ದು, ಇದರಿಂದ 30 ದಿನಗಳಲ್ಲಿ 1ರಿಂದ 2 ಸಿಲಿಂಡರ್ (ಗೃಹ ಬಳಕೆ ಸಾಮರ್ಥ್ಯದ) ಅನಿಲ ಪಡೆಯಬಹುದು. ಪ್ರತಿದಿನ 25 ಕೆಜಿ ಆಹಾರ ತ್ಯಾಜ್ಯವನ್ನು ಸುರಿಯಬೇಕು. ಘಟಕ ಆರಂಭಗೊಂಡ ತಕ್ಷಣ ಸೆಗಣಿ ಗೊಬ್ಬರವನ್ನು ಹಾಕಿ 18 ದಿನಗಳ ಕಾಲ ಬಿಡಬೇಕು. ನಂತರ ಘಟಕ ಕಾರ್ಯಾರಂಭವಾಗುತ್ತದೆ. ಇದರ ಹತ್ತಿರ ನಿಂತರೂ ಕೆಟ್ಟ ವಾಸನೆ ಬರುವುದಿಲ್ಲ. ಇದನ್ನು ಡೇರಿ ಘಟಕ, ಪೌಲಿó, ತರಕಾರಿ ವ್ಯಾಪಾರ ಘಟಕಗಳಲ್ಲಿಯೂ ಬಳಕೆ ಮಾಡಿಕೊಳ್ಳಬಹುದು. ಘಟಕದಿಂದ ಉತ್ಪಾದನೆಯಾಗುವ ಅನಿಲದಿಂದ ಜನರೇಟರ್ ಕೂಡ ನಡೆಸಬಹುದಾಗಿದೆ. ನಿಮ್ಮ ತ್ಯಾಜ್ಯವನ್ನು ನೀವೇ ನಿರ್ವಹಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಅದರಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಘಟಕ ಸ್ಥಾಪಿಸಲಾಗಿದೆ. ಡೆಮೊ ಆರಂಭಗೊಂಡು 5 ದಿನಗಳಾಗಿವೆ. ಸದ್ಯಕ್ಕೆ ಘಟಕದಲ್ಲಿ ಸೆಗಣಿಯನ್ನು ಹಾಕಲಾಗಿದ್ದು, 15 ದಿನಗಳ ನಂತರ ಅನಿಲ ಉತ್ಪಾದನೆ ಆರಂಭಗೊಳ್ಳಲಿದೆ. ನಂತರ ಪ್ರತಿದಿನ ಆಹಾರ ತ್ಯಾಜ್ಯವನ್ನು ಹಾಕಿದ 2 ಗಂಟೆಗಳಲ್ಲಿ ಅನಿಲ ಉತ್ಪಾದನೆಗೊಳ್ಳಲಿದೆ. ಹೋಟೆಲ್, ಪಿಜಿ, ಹಾಸ್ಟೆಲ್‌ನವರು ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಅನಿಲ ಉತ್ಪಾದಿಸಿಕೊಳ್ಳಬಹುದಾಗಿದೆ.
. ನಯನಾ, ಮಹಾನಗರ ಪಾಲಿಕೆ ಅಭಿಯಂತರರು ಈಗಾಗಲೇ ರಾಜ್ಯದ ವಿವಿಧೆಡೆ ಬಯೋ ಗ್ಯಾಸ್ ಘಟಕಗಳನ್ನು ಅಳವಡಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಡಿಮೆ ಜಾಗದಲ್ಲಿ ಘಟಕ ಅಳವಡಿಸಬಹುದಾಗಿದೆ. ಇದರಿಂದ ಆಹಾರ ತ್ಯಾಜ್ಯ ನಿರ್ವಹಣೆ ಸುಲಭವಾಗಲಿದೆ. ಉದ್ಯಾನಕ್ಕೆ ಬಂದ ಅನೇಕ ಜನರು ಘಟಕದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
. ನವೀನ್ ದೊಡ್ಡಮನಿ,
ಪ್ರಾಜೆಕ್ಟ್ ಮ್ಯಾನೇಜರ್, ಜೆಎಂಎಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ವಿಶ್ವನಾಥ ಕೋಟಿ