Advertisement

“ರಕ್ತ ಯಾವುದನ್ನೂ ಪರಿಹರಿಸುವುದಿಲ್ಲ, ಮಾತುಕತೆ ಮೇಲುಗೈ ಸಾಧಿಸಲಿ” : ಮ್ಯಾನ್ಮಾರ್‌ ಗೆ ಪೋಪ್

07:08 PM Mar 17, 2021 | Team Udayavani |

ವ್ಯಾಟಿಕನ್ ಸಿಟಿ : “ನಾನು ಮ್ಯಾನ್ಮಾರ್‌ ನ ಬೀದಿಗಳಲ್ಲಿ ಮಂಡಿಯೂರಿ ‘ಹಿಂಸಾಚಾರವನ್ನು ನಿಲ್ಲಿಸಿ’ ಎಂದು ಕೇಳಿಕೊಳ್ಳುತ್ತೇನೆ”. ಎಂದು ಮ್ಯಾನ್ಮಾರ್‌ ನಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕೊನೆಗೊಳಿಸಬೇಕೆಂದು ಪೋಪ್ ಫ್ರಾನ್ಸಿಸ್ ಬುಧವಾರ(ಮಾ.15)ದಂದು ಮನವಿ ಮಾಡಿಕೊಂಡಿದ್ದಾರೆ.

Advertisement

ಫೆಬ್ರವರಿ 1 ರಿಂದ ಆರಂಭವಾದ ಸೇನಾ ದಂಗೆಯ ವಿರುದ್ಧರ ಜನರ ಹಿಂಸಾಚಾರವನ್ನು ನಿಲ್ಲಿಸುವಂತೆ ಪೋಪ್ ಮನವಿ ಮಾಡಿಕೊಂಡಿದ್ದಾರೆ.

ಓದಿ :  ಹೋಳಿ : ಹೋಲಿಕಾ ದಹನದಂದು ಕೋವಿಡ್ ದಹಿಸಲಿ ಎಂದು ಪ್ರಾರ್ಥಿಸೋಣ

ಭದ್ರತಾ ಪಡೆಗಳು ಪ್ರತಿಭಟನೆಯ ಪ್ರದರ್ಶನವನ್ನು ಹತ್ತಿಕ್ಕಲು ಮಾಡಿದ ಯತ್ನದಿಂದ 180 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

“ಮ್ಯಾನ್ಮಾರ್ ನಲ್ಲಿ ನಾಟಕೀಯ ಪರಿಸ್ಥಿತಿಯ ಬಗ್ಗೆ ದುಃಖವಾಗುತ್ತಿದೆ. ಅಲ್ಲಿ ಅನೇಕ ಜನರು, ಅವರಲ್ಲಿ ಹೆಚ್ಚಿನವರು ಯುವಕರು, ತಮ್ಮ ದೇಶಕ್ಕೆ ಭರವಸೆ ಇಟ್ಟುಕೊಳ್ಳಬೇಕಾದವರು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

Advertisement

“ನಾನು ಮ್ಯಾನ್ಮಾರ್‌ ನ ಬೀದಿಗಳಲ್ಲಿ ಮಂಡಿಯೂರಿ ‘ಹಿಂಸಾಚಾರವನ್ನು ನಿಲ್ಲಿಸಿ’ ಎಂದು ಕೇಳಿಕೊಳ್ಳುತ್ತೇನೆ. ನಾನು ನನ್ನ ತೋಳುಗಳನ್ನು ತೆರೆದು ‘ಮಾತುಕತೆ ಮೇಲುಗೈ ಸಾಧಿಸಲಿ’ ಎಂದು ಹೇಳುತ್ತೇನೆ” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

2017 ರಲ್ಲಿ ಮ್ಯಾನ್ಮಾರ್‌ಗೆ ಭೇಟಿ ನೀಡಿದಾಗಲೂ ಫ್ರಾನ್ಸಿಸ್, “ರಕ್ತ ಯಾವುದನ್ನೂ ಪರಿಹರಿಸುವುದಿಲ್ಲ. ಮಾತುಕತೆ ಮೇಲುಗೈ ಸಾಧಿಸಬೇಕು” ಎಂದು ಹೇಳಿದ್ದರು.

ಓದಿ :  ಮಾರ್ಚ್ 30ರಿಂದ ಏ.2: ಕೇರಳದಲ್ಲಿ ಬಿಜೆಪಿಗೆ ಪ್ರಧಾನಿ ಮೋದಿ, ಶಾ ಸ್ಟಾರ್ ಪ್ರಚಾರಕರು

Advertisement

Udayavani is now on Telegram. Click here to join our channel and stay updated with the latest news.

Next