ಬ್ಲೂಮ್‌ಬರ್ಗ್: ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಫೇಸ್‌ಬುಕ್‌ಗೆ (ಎಫ್ಬಿ) ನೀಡುತ್ತಿದ್ದ ಜಾಹೀರಾತುಗಳನ್ನು ತಾತ್ಕಾಲಿಕವಾಗಿ ಹಿಂಪಡೆದ ಹಿನ್ನೆಲೆಯಲ್ಲಿ ಅದರ ಸಿಇಒ ಮಾರ್ಕ್ ಜುಕರ್‌ಬರ್ಗ್ 54,400 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಅತಿ ದೊಡ್ಡ ಜಾಹೀರಾತುದಾರರಲ್ಲಿ ಒಂದಾಗಿರುವ ಯುನಿಲಿವರ್ ಸಂಸ್ಥೆ ಕೂಡ ಈ ವರ್ಷವಿಡೀ ಜಾಹೀರಾತು ನೀಡದಿರಲು ನಿರ್ಧರಿಸಿದ ಬೆನ್ನಲ್ಲೇ ಶುಕ್ರವಾರ ಫೇಸ್‌ಬುಕ್‌ನ ಶೇರುಗಳ ಬೆಲೆ ಶೇ.8.3ರಷ್ಟು ಕುಸಿದಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ದ್ವೇಷದ ಭಾಷಣ ಅಥವಾ ಮಾತು ಹಾಗೂ ತಪ್ಪು ಮಾಹಿತಿ ಒಳಗೊಂಡ ಪೋಸ್ಟ್ಗಳನ್ನು ತಡೆಯುವಲ್ಲಿ ಫೇಸ್‌ಬುಕ್ ವಿಫಲ ವಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಸ್ಥೆಗಳು ಜಾಹೀರಾತು ನೀಡುವುದರಿಂದ ಹಿಂದೆ ಸರಿಯುತ್ತಿವೆ ಎಂದು ಹೇಳ ಲಾ ಗಿ ದೆ. ಷೇರು ಬೆಲೆ ಕುಸಿತದಿಂದಾಗಿ ಫೇಸ್‌ಬುಕ್‌ನ ಮಾರು ಕಟ್ಟೆ ಮೌಲ್ಯದಲ್ಲಿ 4.23 ಲಕ್ಷ ಕೋಟಿ ರೂ. ಕಡಿಮೆಯಾಗಿದ್ದು, ಮಾರ್ಕ್ ಜುಕರ್‌ಬರ್ಗ್‌ರ ನಿವ್ವಳ ಆದಾಯ ದಲ್ಲಿ ಬರೋಬ್ಬರಿ 6.22 ಲಕ್ಷ ಕೋಟಿ ರೂ. ಕುಸಿತ ಕಂಡುಬಂದಿದೆ. ಇದರೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಜುಕರ್‌ಬರ್ಗ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಲೂಯಿಸ್ ವಿಡಾನ್ ಸಂಸ್ಥೆ ಮಾಲೀಕ ಅರ್ನಾಲ್ಟ್ 3ನೇ ಸ್ಥಾನ ಅಲಂಕರಿಸಿದ್ದಾರೆ ಎಂದು ಬ್ಲೂಂಬರ್ಗ್ ಬಿಲೇನಿಯರ್ ಇಂಡೆಕ್ಸ್ ಮಾಹಿತಿ ನೀಡಿದೆ.
ಜಾಹೀರಾತು ನಿಲ್ಲಿಸಿದ ಕೊಕಾ ಕೋಲ
ಫೇಸ್‌ಬುಕ್‌ನ ಪ್ರಮುಖ ಜಾಹೀ ರಾತುದಾರರಲ್ಲಿ ಒಂದಾದ ಕೊಕಾ ಕೋಲ ಕೂಡ ಮುಂದಿನ 30 ದಿನಗಳ ಕಾಲ ಫೇಸ್‌ಬುಕ್‌ಗೆ ಜಾಹೀರಾತು ನೀಡುವುದಿಲ್ಲ ಎಂದು ತಿಳಿಸಿದೆ. ವರ್ಣಭೇದ ನೀತಿ ಕುರಿತ ಪೋಸ್ಟ್ ಗಳನ್ನು ನಿರ್ವಹಿಸುವಲ್ಲಿ ಎಫ್‌ಬಿ ವಿಫಲವಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಸಂಸ್ಥೆ ಸಿಇಒ ಜೇಮ್ಸ್ ಕ್ವೆನ್ಸಿ, ಜಗತ್ತಿನಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣದಲ್ಲೇ ಆಗಲಿ ವರ್ಣಭೇದ ನೀತಿಗೆ ಅವಕಾಶ ಇರಕೂಡದು ಎಂದಿದ್ದಾರೆ.