Advertisement

Kasaragod ಕಳಪೆ ಹೊದಿಕೆ: ಕಾಸರಗೋಡು ಶಾಸಕರಿಂದ ಸೈಬರ್‌ ದೂರು ದಾಖಲು

10:04 PM Oct 14, 2023 | Team Udayavani |

ಕಾಸರಗೋಡು: ಆನ್‌ಲೈನ್‌ ಮೂಲಕ ಬುಕ್‌ ಮಾಡಿ ಖರೀದಿಸಿದ ಹೊದಿಕೆಯು ತೀರಾ ಕಳಪೆಯಾಗಿದೆ ಎಂದು ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕನ್ನು ಅವರು ಸೈಬರ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

ಶಾಸಕರು ಆನ್‌ಲೈನ್‌ನಲ್ಲಿ 1,200 ರೂ.ಯ ಹೊದಿಕೆಯನ್ನು ಬುಕ್‌ ಮಾಡಿದ್ದರು. ಆದರೆ ತಾನು ಬುಕ್‌ ಮಾಡಿದ್ದ ಹೊದಿಕೆ ಮತ್ತು ತನಗೆ ತಲುಪಿರುವ ಹೊದಿಕೆ ಹೊಂದಾಣಿಕೆಯಾಗುತ್ತಿಲ್ಲ. ತೀರಾ ಕಳಪೆ ಗುಣಮಟ್ಟವಿಲ್ಲದ ಹೊದಿಕೆಯನ್ನು ನೀಡಲಾಗಿದೆ ಎಂದು ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next