Advertisement

“ದಿ ಜರ್ನಿ ಆಫ್ ಕರ್ಮಾ’ ಟ್ರೈಲರ್‌ನಲ್ಲಿ ಪೂನಂ ಬೋಲ್ಡ್​ಲುಕ್​​: Watch

03:34 PM Oct 03, 2018 | Team Udayavani |

ಹಾಟ್​​ ಬೆಡಗಿ​ ಪೂನಂ ಪಾಂಡೆ ಅಭಿನಯದ “ದಿ ಜರ್ನಿ ಆಫ್ ಕರ್ಮಾ’ ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 1.43 ನಿಮಿಷದ ಈ ಟ್ರೈಲರ್​​, ಅರ್ಧದಷ್ಟು ಭಾಗ ಹಸಿ-ಬಿಸಿ ದೃಶ್ಯಗಳಿಂದಲೇ ತುಂಬಿಕೊಂಡಿದೆ. ಯುವಕರ ಹಾಟ್ ಫೇವರೇಟ್ ಎಂದೇ ಖ್ಯಾತಿಯಾಗಿರುವ ಪೂನಂ, ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಚಿತ್ರದಲ್ಲಿ ಇವರ ಬಾಯ್​ಫ್ರೆಂಡ್ ಆಗಿ ಹಿರಿಯ ನಟ ಶಕ್ತಿ ಕಪೂರ್ ನಟಿಸಿದ್ದಾರೆ. ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಚಿತ್ರದ ಟ್ರೈಲರ್ ಸಿನಿಮಾದ ಮೇಲಿನ ಭರವಸೆಯನ್ನು ಹೆಚ್ಚಿಸುತ್ತಿದೆ. ಅಲ್ಲದೇ ಟ್ರೈಲರ್​ನಲ್ಲೇ ಈ ತರಹ ಸೀನ್​ಗಳಿವೆ, ಇನ್ನು ಚಿತ್ರ ಯಾವ ರೀತಿ ಇರಬಹುದು ಎನ್ನುವ ಮಾತು ಶುರುವಾಗಿದೆ.

ಇನ್ನು ಚಿತ್ರಕ್ಕೆ ಜಗ್‍ಬೀರ್ ದಹಿಯಾ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಅಕ್ಷಯ್ ಕಲೇಡಿ ಸಂಕಲನ, ದನೀಶ್ ಅಲ್ಫಾಜ್, ನಿಶಾಂತ್ ಸಲೀಲ್, ಓಂಕಾರ್ ಮಿನ್ಹಾಸ್ ಸಂಗೀತ ಚಿತ್ರಕ್ಕಿದ್ದು, ಇಂತಹ ಚಿತ್ರದಲ್ಲಿ ನಟಿಸಿರುವ ಶಕ್ತಿ ಕಪೂರ್​ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್​ ಆಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next