Advertisement

ಬಾಲಿವುಡ್‌ ನಟಿ, ನಿರ್ದೇಶಕಿ ಪೂಜಾ ಭಟ್‌ ‘ಏಜಂಟ್‌’ನಿಂದ ಭಾರೀ ವಂಚನೆ

12:28 PM Feb 23, 2017 | udayavani editorial |

ಮುಂಬಯಿ : ಸಾಲಿಟ್ಯೂಡ್‌ ಲೈಫ್ ಸ್ಟೈಲ್‌ ಇಂಕ್‌ ಕಂಪೆನಿಯ ಪ್ರಶಾಂತ್‌ ಮಳಗೇವಾರ್‌ ಎಂಬಾತ ನನ್ನ ಏಜಂಟ್‌ ಎಂದು ಹೇಳಿಕೊಂಡು ಈವೆಂಟ್‌ ಕಂಪೆನಿಗಳಿಂದ ಭಾರೀ ಪ್ರಮಾಣದ ಹಣ ಸಂಗ್ರಹಿಸಿ ವಂಚನೆ ಎಸಗಿರುವುದಾಗಿ 44ರ ಹರೆಯದ ಬಾಲಿವುಡ್‌ ನಟಿ-ನಿರ್ದೇಶಕಿ ಪೂಜಾ ಭಟ್‌ ಬಹಿರಂಗಪಡಿಸಿದ್ದಾಳೆ.

Advertisement

ನನ್ನ ಏಜಂಟ್‌ ಎಂದು ಹೇಳಿಕೊಂಡ ಮಳಗೇವಾರ್‌ ಗೆ ಹಣ ಕೊಟ್ಟಿರುವ ಈವೆಂಟ್‌ ಕಂಪೆನಿಗಳಲ್ಲಿ ಯಾರೂ ಕೂಡ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ; ಆತನಿಗೆ ಹಣ ಕೊಡುವ ಮುನ್ನ ನನ್ನ ಸಹಿ ಇರುವ ಇನ್‌ವಾಯ್ಸ ಪಡೆದುಕೊಂಡಿಲ್ಲ; ಈ ವ್ಯಕ್ತಿಯ ಸಾಚಾತನವನ್ನು ಅವರು ಪರೀಕ್ಷಿಸಿಲ್ಲ; ಈ ರೀತಿ ಯಾರಾದರೂ ಕಣ್ಣುಮುಚ್ಚಿಕೊಂಡು ಬೇಜವಾಬ್ದಾರಿಯಿಂದ ಲಕ್ಷಾಂತರ ರೂಪಾಯಿ ಹಣ ಕೊಡುವುದುಂಟೆ ?

ಇದು ನಿಜಕ್ಕೂ ಅತ್ಯಂತ ಅಪಾಯಕಾರಿ ಬೆಳವಣಿಗೆ;  ಪೊಲೀಸರು ಮಳಗೇವಾರ್‌ ಎಸಗಿರುವ ವಂಚನೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 44ರ ಹರೆಯದ ಜಿಸ್‌ಮ್‌ ಚಿತ್ರದ ನಿರ್ಮಾಪಕಿ-ನಿರ್ದೇಶಕಿ ಪೂಜಾ ಭಟ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next