Advertisement
ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ಯಕ್ಷರಂಗಕ್ಕೆ ಕೊಡುಗೆಯ ಬಗ್ಗೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲ್ಯ ಲಕ್ಷಿ¾à ನಾರಾಯಣ ಶೆಟ್ಟಿ ಅವರು ತೆಂಕು ಮತ್ತು ಬಡಗು ತಿಟ್ಟುಗಳೆರಡಲ್ಲೂ ಮೇರು ಭಾಗವತರಾಗಿ ಮಿಂಚಿದ ಪ್ರಸಿದ್ಧ ಭಾಗವತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಂತಹ ಭಾಗವತರನ್ನು ಇದುವರೆಗೂ ಯಾರೂ ಕಂಡಿಲ್ಲ. ಕಾಳಿಂಗ ನಾವುಡರೊಡನೆ ದ್ವಂದ ಭಾಗವತಿಕೆ ನಡೆಸಿದ ಕೀರ್ತಿ ಅವರಿಗಿದೆ. ಮುಂಬಯಿಯಲ್ಲಿ ಯಕ್ಷಗಾನದ ಉಳಿವಿನಲ್ಲಿ ಪೊಲ್ಯರ ಪಾತ್ರ ಮಹತ್ತರವಾಗಿದೆ ಎಂದರು.
Related Articles
Advertisement
ವೇದಿಕೆಯಲ್ಲಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ರವಿ ಎಸ್. ಮಂಜೇಶ್ವರ, ಕರ್ನಾಟಕ ಸಂಘ ಭಾಂಡೂಪ್‌ನ ಅಧ್ಯಕ್ಷ ಗಿರೀಶ್ ಆರ್. ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಶೆಟ್ಟಿ, ಶ್ರೀ ಶನೀಶ್ವರ ಮಂದಿರ ಭಟ್ಟಪಾಡಿ ಭಾಂಡೂಪ್‌ನ ಅಧ್ಯಕ್ಷ ದಯಾನಂದ ಶೆಟ್ಟಿ, ತೀಯಾ ಬೆಳಕಿನ ಸಂಪಾದಕ ಶ್ರೀಧರ ಸುವರ್ಣ, ಸಸಿಹಿತ್ಲು ಭಗವತೀ ಸಂಘದ ಕೋಶಾಧಿಕಾರಿ ರಮೇಶ್ ಸಾಲ್ಯಾನ್, ಉದ್ಯಮಿ ಸುಧಾಕರ ಬೆಳ್ಚಡ, ಘಾಟ್‌ಕೋಪರ್ ಬಿಜೆಪಿ ದಕ್ಷಿಣ ಸಮಿತಿಯ ಸದಾನಂದ ಶೆಟ್ಟಿ ಕಿನ್ನಿಗೋಳಿ, ಉದ್ಯಮಿ, ರಾಜೇಶ್ ಸುವರ್ಣ, ಜನಪ್ರಿಯ ಯಕ್ಷಗಾನ ಮಂಡಳಿಯ ಅಧ್ಯಕ್ಷ ರವೀಂದ್ರ ಪೈ, ಉದ್ಯಮಿ ಕೆ. ಜೆ. ಕೋಟ್ಯಾನ್, ಸೀತಾರಾಮ ಜಿ. ಕರ್ಕೇರ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ಶಂಭು ಕೆ. ಸನಿಲ್ ಅವರ ಧಾರ್ಮಿಕ ಗ್ರಂಥ ಅಮೃತ ಸರೋವರವನ್ನು ಬಿಡುಗಡೆಗೊಳಿಸಲಾಯಿತು. ರಂಗನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಧ್ವನಿಯ ಸಂಯೋಜಕ ಯಕ್ಷಗಾನ ಕಲಾವಿದ ರಾಜ ತುಂಬೆ ಅವರು ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಊರಿನ ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗದಾಯುದ್ಧ ಯಕ್ಷಗಾನ ಪ್ರದರ್ಶನಗೊಂಡಿತು. ಚಿತ್ರ-ವರದಿ : ಸುಭಾಷ್ ಶಿರಿಯಾ