Advertisement
ಹೆದ್ದಾರಿಯ ಈ ಭಾಗದಲ್ಲಿ ಸರ್ವಿಸ್ ರಸ್ತೆಯು ಬರುತ್ತಿದೆ. ಈ ರಸ್ತೆ ಪಕ್ಕದಲ್ಲಿ ಹಿಂದೂಸ್ತಾನ್ ಯುನಿಲೀವರ್‌ನ ಪ್ರಮುಖ ಡೀಲರ್ ಒಬ್ಬರಿದ್ದಾರೆ. ಸಿಮೆಂಟ್ ವ್ಯಾಪಾರಿ ಆಟೋಟ ಸಾಮಾಗ್ರಿಗಳ ಮಳಿಗೆ ಸಹಿತ ವಿವಿಧ ವ್ಯವಹಾರ ಸಂಸ್ಥೆಗಳಿದ್ದು ಇದೀಗ ಈ ಭಾಗವು ಉತ್ತು ಬಿತ್ತಿದ ಗದ್ದೆಯಂತಾಗಿದೆ. ಘನ ವಾಹನಗಳನ್ನು ಇಲ್ಲಿಗೆ ತರಲಾಗುತ್ತಿಲ್ಲ. ಇಲ್ಲಿಂದ ಘನ ವಾಹನಗಳಾಗಲೀ, ಕಾರು ಸಹಿತ ಯಾವುದೇ ದ್ವಿಚಕ್ರ ವಾಹನಗಳು ಹೊರ ಹೋಗದ ಸ್ಥಿತಿ ತಲುಪಿದೆ. ಮಳೆಯ ಸಂದರ್ಭದಲ್ಲಂತೂ ಹೂತು ಹೋದ ಲಾರಿಯನ್ನು ಎರಡು ದಿನಗಳು ಶ್ರಮಪಟ್ಟು ಹೊರತೆಗೆಯಲಾಗಿದೆ.
Related Articles
ದಿನಕ್ಕೊಂದು ಲಕ್ಷ ರೂ.ಗಳಷ್ಟು ಜಿಎಸ್‌ಟಿ ಪಾವತಿ ಮಾಡುವ ಉದ್ದಿಮೆಯು ತನ್ನದಾಗಿದ್ದು ಹೊರಗಡೆ ಮಾರುಕಟ್ಟೆಗೆ ತಾನು ಸರಬರಾಜು ಮಾಡಬೇಕಾದ ದಿನೋಪಯೋಗಿ ಲಿಫ್ಟಿಕ್ ಸಹಿತ ಟೂತ್ ಪೇಸ್ಟ್, ಸೋಪು, ಶ್ಯಾಂಪು ಮುಂತಾದವುಗಳನ್ನು ಸಾಗಿಸಲು ಇದೀಗ ತಾನು ಹರ ಸಾಹಸ ಪಡಬೇಕಾಗಿದೆ. ಅಭಿವೃದ್ಧಿಯ ಹೆಸರಲ್ಲಿ ತೆರಿಗೆ ಪಾವತಿದಾರರ ಸಂಕಷ್ಟಗಳಿಗೆ ಸ್ಪಂದಿಸುವವರಿಲ್ಲವೆನ್ನುವ ನೋವನ್ನೂ ಉದ್ದಿಮೆದಾರ ಅರವಿಂದ ಕಾಮತ್ ಉದಯವಾಣಿ’ಯೊಂದಿಗೆ ತೋಡಿಕೊಂಡಿದ್ದಾರೆ. ಈ ರಸ್ತೆಯನ್ನು ಘನವಾಹನಗಳ ಸಂಚಾರಕ್ಕೆ ಅನುವಾಗುವಂತೆ ಸಿಮೆಂಟ್, ಜೆಲ್ಲಿ ಮಿಕ್ಸ್ ಮೂಲಕವಾದರೂ ಜಿಲ್ಲಾಡಳಿತವು ಮುತುವರ್ಜಿ ವಹಿಸಿ ಸಂಚಾರ ಯೋಗ್ಯವನ್ನಾಗಿಸಬೇಕಿದೆ ಎಂದಿದ್ದಾರೆ.
Advertisement