Advertisement

ಬಿಜೆಪಿ ಸರಕಾರದಿಂದ ಕುಡಿಯುವ ನೀರಲ್ಲೂ ರಾಜಕೀಯ: ಡಾ.ಜಿ.ಪರಮೇಶ್ವರ್ ಆಕ್ರೋಶ

10:00 PM Dec 19, 2022 | Team Udayavani |

ಕೊರಟಗೆರೆ: ಕುಡಿಯುವ ನೀರಿನಲ್ಲೂ ಬಿಜೆಪಿ ಸರಕಾರ ರಾಜಕೀಯ ಮಾಡುತ್ತಿದೆ.. ಕರ್ನಾಟಕ ರಾಜ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಬೆಸ್ಕಾಂ ಇಲಾಖೆಯ ಕಾರ್ಯಚರಣೆ ಕೊರಟಗೆರೆಯಲ್ಲಿ ಮಾತ್ರ ಏಕೆ.. ಶುದ್ದ ಕುಡಿಯುವ ನೀರಿಲ್ಲದೇ ಬಡಜನರ ಆರೋಗ್ಯಕ್ಕೆ ಸಮಸ್ಯೆ ಆದರೇ ಅದಕ್ಕೆ ರಾಜ್ಯ ಸರಕಾರವೇ ಜವಾಬ್ದಾರಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಬೂತ್ ಸಮಿತಿಯ ಸರ್ವಸದಸ್ಯರ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬಡ ಜನರಿಂದ ವಸೂಲಿ ಮಾಡಿದ ಕುಡಿಯುವ ನೀರಿನ ಹಣ ಎಲ್ಲಿ ಹೋಯ್ತು. ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುತ್ತಿದೆ. ಗುತ್ತಿಗೆದಾರ ವಸೂಲಿ ಮಾಡಿರುವ ನೀರಿನ ಹಣದ ವಿಚಾರದಲ್ಲಿ ಸರಕಾರ ತನಿಖೆ ನಡೆಸಲಿ. ಬೆಸ್ಕಾಂ ಇಲಾಖೆ ತಕ್ಷಣ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ಮೀಸಲಾತಿ ಹೆಚ್ಚಳದ ಆದೇಶವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಲೋಕ ಸಭೆಯ ಸಧನದಲ್ಲೇ ಬಿಜೆಪಿ ಕೇಂದ್ರ ಸರಕಾರದ ಸಚಿವರೇ ಮೀಸಲಾತಿ ಹೆಚ್ಚಳದ ತಿರಸ್ಕಾರದ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರ ಮೀಸಲಾತಿ ಹೆಚ್ಚಳವನ್ನು ಸಂವಿಧಾನ ಬದ್ದವಾಗಿ ಮಾಡದೇ ರಾಜಕೀಯ ಪ್ರೇರಿತವಾಗಿ ಮಾಡಿದೆ ಎಂದರು.

ಪರ್ಸಂಟೇಜ್ ಸರಕಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಚಾರ ತಾಂಡವಾಡುತ್ತಿದೆ. ಪೇಟ್ರೊಲ್-ಡಿಸೇಲ್ ಏರಿಕೆ, ಗ್ಯಾಸ್ ಬೆಲೆ ಏರಿಕೆ ಮತ್ತು ರೌಡಿಸಂಗೆ ಆಧ್ಯತೆ ನೀಡುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಬೂತ್‌ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯ ಮಾಡಲಿದ್ದಾರೆ ಎಂದರು.

Advertisement

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಯುವಾಧ್ಯಕ್ಷ ವಿನಯ್‌ಕುಮಾರ್, ಮುಖಂಡರಾದ ಬಲರಾಮಯ್ಯ, ಓಬಳರಾಜು, ಕೆಂಪರಾಮಯ್ಯ, ಕುಮಾರ್, ವೆಂಕಟಬಾಬು, ಅರವಿಂದ್, ರವಿಕುಮಾರ್, ಸೇರಿದಂತೆ ಇತರರು ಇದ್ದರು.

58 ಸಾವಿರ ಸದಸ್ಯತ್ವ ಡಿಜಿಟಲ್ ಕಾರ್ಡು..

ಕೊರಟಗೆರೆ ಕ್ಷೇತ್ರದ 242 ಬೂತ್‌ನಲ್ಲಿ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಆಗಿರುವ ಸದಸ್ಯರಿಗೆ ಭಾವಚಿತ್ರ ಇರುವಂತಹ 58 ಸಾವಿರ ಡಿಜಿಟಲ್ ಕಾರ್ಡು ವಿತರಣೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ತಳ ಮಟ್ಟದಿಂದ ಸಂಘಟನೆಯ ಅಭಿಯಾನ ನಡೆಯಲಿದೆ. ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ಕ್ಷೇತ್ರವು ಮೊದಲನೇ ಸ್ಥಾನದಲ್ಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next