Advertisement

ಗಲಭೆ ಹಿಂದೆ ರಾಜಕೀಯ ಹುನ್ನಾರ: ನಳಿನ್‌

12:30 AM Aug 13, 2020 | mahesh |

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದಿರುವ ಗಲಭೆ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ರಾಜಕೀಯ ಹುನ್ನಾರವಿರುವ ಶಂಕೆ ಇದೆ. ಕೆಲವು ವಿಚ್ಛಿದ್ರಕಾರಿ ಕಾಣದ ಶಕ್ತಿಗಳು ಇದರಲ್ಲಿ ಸೇರಿಕೊಂಡಿದ್ದು, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಷಡ್ಯಂತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಆರೋಪಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ವಿಷಯ ಪ್ರಸಾರ ಮಾಡಿದ್ದರೆ ಕಾನೂನು ಕ್ರಮಕ್ಕೆ ಒತ್ತಾಯಿಸಲಿ, ಪ್ರತಿ ಭಟಿಸಲಿ. ಈ ರೀತಿ ಶಾಸಕರ ಮನೆ, ಪೊಲೀಸರು ಹಾಗೂ ಮಾಧ್ಯಮ ದವರ ಮೇಲೆ ದಾಳಿ ಮಾಡುವುದನ್ನು ಸಹಿಸಲಾಗದು ಎಂದರು.

ಏಕಾಏಕಿ 3 ಸಾವಿರಕ್ಕೂ ಅಧಿಕ ಜನರು ಗುಂಪುಗೂಡುವುದು, ಶಸ್ತ್ರ, ಕಲ್ಲು, ಪೆಟ್ರೋಲ್‌ನೊಂದಿಗೆ ದಾಳಿಗೆ ಮುಂದಾಗಿರುವುದನ್ನು ನೋಡಿದರೆ ಇದರ ಹಿಂದೆ ಎಸ್‌ಡಿಪಿಐ ಮತ್ತು ಕೆಡಿಎಫ್ನಂಥ ಸಂಘಟನೆಗಳ ಕೈವಾಡದ ಶಂಕೆ ಮೂಡಿದೆ ಎಂದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಆ.22ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಬಹುತೇಕ ಜಿಲ್ಲೆಗಳಿಗೆ ಸರಾಸರಿ 7 ಬಾರಿ ಭೇಟಿ ನೀಡಿ ಪಕ್ಷ ಸಂಘಟನೆ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ಹೆಗಡೆಯಿಂದ ವಿವರಣೆ ಪಡೆಯುವೆ: ನಳಿನ್‌
ಹುಬ್ಬಳ್ಳಿ: ಬಿಎಸ್‌ಎನ್‌ಎಲ್‌ನಲ್ಲಿ ಉಗ್ರರಿದ್ದಾರೆಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದರ ಬಗ್ಗೆ ನನಗೆ ಅಧಿಕೃತ ಮಾಹಿತಿ ಇಲ್ಲ. ಅವರಿಂದ ವಿವರಣೆ ಕೇಳುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಹೇಳಿದರು. ಮಥುರಾ, ಕಾಶಿ ವಿಚಾರವಾಗಿ ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆಗೆ ನಿರಾಕರಿಸಿದರು.

Advertisement

ನಿಗಮ ಮಂಡಳಿ: ಶೇ.60ರಷ್ಟು ಕಾರ್ಯಕರ್ತರಿಗೆ ವಿವಿಧ ನಿಗಮ-ಮಂಡಳಿಗಳ ನೇಮಕದಲ್ಲಿ ಶೇ.60 ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ, ಶೇ.40ರಷ್ಟು ಶಾಸಕರಿಗೆ ಮೀಸಲಿಡಲಾಗುವುದು. ನಮ್ಮದು ಕಾರ್ಯಕರ್ತರಿಗೆ ಆದ್ಯತೆ ನೀಡುವ ಪಕ್ಷವಾಗಿದೆ ಎಂದು ನಳಿನ್‌ಕುಮಾರ್‌ ಅವರು ಹೇಳಿದರು.

ದೇಶದ್ರೋಹಿಗಳ ಕೃತ್ಯ: ಸುರೇಶ್‌ ಅಂಗಡಿ
ಬೆಳಗಾವಿ: ಬೆಂಗಳೂರಿ ನಲ್ಲಿ ಗಲಭೆ ನಡೆಸಿ ಸಮಾಜದಲ್ಲಿ ಶಾಂತಿ ಕದಡಿದವರು ದೇಶದ್ರೋಹಿ ಗಳು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆಗ್ರಹಿಸಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವಹೇ ಳನಕಾರಿ ಪೋಸ್ಟ್‌ ಸಂಬಂಧಿ ಸಿ ಬೆಂಗಳೂರಿನಲ್ಲಿ ದಾಂಧಲೆ ಎಬ್ಬಿಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದವರನ್ನು ಸುಮ್ಮನೆ ಬಿಡಬಾರದು. ವ್ಯವಸ್ಥಿತವಾಗಿ ಸಂಚು ರೂಪಿಸಿ ದಾಂಧಲೆ ನಡೆಸಲಾಗಿದೆ. ಸುಮಾರು 15 ದಿನಗಳ ಹಿಂದೆ ಬೆಳಗಾವಿಯಲ್ಲಿ ಬಿಮ್ಸ್‌ ಆಸ್ಪತ್ರೆ ಹಾಗೂ ಆ್ಯಂಬು ಲೆನ್ಸ್‌ಗೆ ಬೆಂಕಿ ಹಚ್ಚಿದ್ದು, ಇದೇ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಗಲಾಟೆ ನಡೆಸಲಾಗಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.

ಎಸ್‌ಡಿಪಿಐ, ಪಿಎಫ್ಐ ನಿಷೇಧಕ್ಕೆ ಆಗ್ರಹ
ಬೆಂಗಳೂರು: ಗಲಭೆ ಪೀಡಿತ ಡಿ.ಜೆ.ಹಳ್ಳಿಗೆ ಬುಧವಾರ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಪ್ರಕರಣ ವ್ಯವಸ್ಥಿತ ಷಡ್ಯಂತ್ರ. ಕೇರಳದಿಂದ ಬಂದ ಎಸ್‌ಡಿಪಿಐಯವರು ದಾಂಧಲೆ ನಡೆಸಿದ್ದು, 6 ಮಂದಿ ಗುಂಡೇಟು ತಿಂದು ಪರಾರಿಯಾಗಿದ್ದಾರೆ. ಅವರು ಕೇರಳದವರೇ ಎಂಬ ಬಗ್ಗೆ ತನಿಖೆಯಾಗಬೇಕು. ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇ ಧಿಸಬೇಕು ಎಂದು ಆಗ್ರಹಿಸಿದರು.

ದೇಶದ್ರೋಹ ಪ್ರಕರಣ ದಾಖಲಿಸಿ: ರೇಣುಕಾಚಾರ್ಯ
ಹೊನ್ನಾಳಿ: ಬೆಂಗಳೂರಿನ ಗಲಭೆಕೋರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಕಾನೂನನ್ನು ಯಾರು ಕೈಗೆತ್ತಿ ಕೊಂಡರೂ ನಮ್ಮ ಸರಕಾರ ಸಹಿಸುವುದಿಲ್ಲ. ಸರಕಾರದ ಕ್ರಮ ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next