ನವದೆಹಲಿ/ತಿರುವನಂತಪುರ: ಕೇರಳದಲ್ಲಿ ಲವ್ ಮತ್ತು ಮಾದಕ ವಸ್ತುಗಳ ಜಿಹಾದ್ ಜಾಲ ಸಕ್ರಿಯವಾಗಿದೆ ಎಂದು ಬಿಷಪ್ ಜೋಸೆಫ್ ಕಲ್ಲರಂಘಾಟ್ ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಮುರಳೀಧರನ್ ಮಾತನಾಡಿ, ಮದ್ಯ ಮತ್ತು ಮಾದಕ ವಸ್ತುಗಳ ಮಾಫಿಯಾ ವಿಚಾರದ ಮೂಲಕ ಒಂದು ವರ್ಗಕ್ಕೆ ಅನ್ಯಾಯವಾಗುತ್ತದೆ ಎಂದು ಹೇಳುವುದು ಸರಿಯಲ್ಲ.ರಾಜ್ಯದಲ್ಲಿ ಸಂಘ ಪರಿವಾರ ಈ ವಿವಾದವನ್ನು ಉಪಯೋಗಿಸಿಕೊಂಡು ಪ್ರವರ್ಧಮಾನಕ್ಕೆ ಬರಲು ಬಿಡಬಾರದು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಬಿಷಪ್ ಅವರ ಮಾತುಗಳು ಕೇವಲ ಭಯೋತ್ಪಾದನೆ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯಗಳು.
ಇದನ್ನೂ ಓದಿ:ಗಣಪನ ಕೊರಳಲ್ಲಿ ಹೆಡೆ ಬಿಚ್ಚಿ ಭಕ್ತರಿಗೆ ದರ್ಶನ ನೀಡಿದ ಜೀವಂತ ನಾಗರ ಹಾವು !
ಆದರೆ, ಕಾಂಗ್ರೆಸ್ ಮತ್ತು ಸಿಪಿಎಂ ಧರ್ಮಗುರುವಿನ ವಿರುದ್ಧ ತಿರುಗಿಬಿದ್ದದ್ದು ಸರಿಯಲ್ಲ ಎಂದರು. ಕಾಂಗ್ರೆಸ್, ಸಿಪಿಎಂ ಧಾರ್ಮಿಕ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಸುರೇಂದ್ರನ್ ದೂರಿದ್ದಾರೆ.