Advertisement
ಪವಾರ್ ಗೃಹದಲ್ಲಿ ಇತರೆ ಆಡಳಿತ ವಿರೋಧಿ ಪಕ್ಷಗಳ ಪ್ರಮೂಕ ನಾಯಕರ ಸಭೆ ನಡೆದ ಬೆನ್ನಲ್ಲೇ ಕಿಶೋರ್, ಪವಾರ್ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ರಂಗದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
Related Articles
Advertisement
ಪವಾರ್ ನಿನ್ನೆ(ಮಂಗಳವಾರ, ಜೂನ್ 22) ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಎಡಪಕ್ಷಗಳನ್ನು ಒಳಗೊಂಡು ಎಂಟು ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನವ ದೆಹಲಿಯ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಆದಾಗ್ಯೂ ಆ ಚರ್ಚೆಗಳಲ್ಲಿ ಭಾಗವಹಿಸಿದ ನಾಯಕರು ಸಮಾನ ಮನಸ್ಕ ವ್ಯಕ್ತಿಗಳ “ರಾಜಕೀಯೇತರ” ಸಭೆ ಎಂದು ಪ್ರತಿಪಾದಿಸಿದ್ದರು.
ಇನ್ನು, ಪವಾರ್ ಅವರ ನಿವಾಸದಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ರಾಷ್ಟ್ರೀಯ ಸಮ್ಮೇಳನದ ಮುಖಂಡ ಒಮರ್ ಅಬ್ದುಲ್ಲಾ, ಎಸ್ ಪಿ ಯ ಘನಶ್ಯಾಮ್ ತಿವಾರಿ, ಆರ್ ಎಲ್ ಡಿ ಅಧ್ಯಕ್ಷ ಜಯಂತ್ ಚೌಧರಿ, ಎಎಪಿಯಿಂದ ಸುಶೀಲ್ ಗುಪ್ತಾ, ಸಿಪಿಐನಿಂದ ಬಿನೊಯ್ ವಿಶ್ವ, ಸಿಪಿಐ-ಎಂನಿಂದ ನಿಲೋತ್ಪಲ್ ಬಸು ಮತ್ತು ಟಿಎಂಸಿ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ, ಮಾಜಿ ಕಾಂಗ್ರೆಸ್ ಮುಖಂಡ ಸಂಜಯ್ ಝಾ ಮತ್ತು ಜನತಾದಳ-ಯುನೈಟೆಡ್ (ಜೆಡಿ-ಯು) ಮಾಜಿ ನಾಯಕ ಪವನ್ ವರ್ಮಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಒಟ್ಟಿನಲ್ಲಿ, ವಿರೋಧ ಪಕ್ಷಗಳ ಪ್ರಮುಖ ನಾಯಕರ ಈ ಸಭೆ ದೊಡ್ಡ ಪ್ರಮಾಣದಲ್ಲಿ ಕುತೂಹಲ ಮೂಡಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ವಿರೋಧ ಪಕ್ಷದ ನಾಯಕರುಗಳೊಂದಿಗೆ ಆಡಳಿತ ಬಿಜೆಪಿ ವಿರುದ್ಧ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೊಸ ತಂತ್ರ ಹೆಣೆಯಲು ಹೆಜ್ಜೆಯಿಟ್ಟಿದ್ದಾರಾ ..? ಎಂಬ ಪ್ರಶ್ನೆ ಎಬ್ಬಿಸಿದೆ.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 6455 ಸೋಂಕಿತರು ಗುಣಮುಖ; 4436 ಹೊಸ ಪ್ರಕರಣ ಪತ್ತೆ