Advertisement

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

04:27 PM Jan 07, 2025 | Team Udayavani |

ಪಾಟ್ನಾ: ಬಿಹಾರ ಲೋಕಸೇವಾ ಆಯೋಗದ ಪರೀಕ್ಷಾ ಅಭ್ಯರ್ಥಿಗಳನ್ನು ಬೆಂಬಲಿಸಿ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದ್ದು ಈ ನಡುವೆ ಅವರ ಅರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿದ್ದು ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು

Advertisement

ಜನ್ ಸೂರಜ್ ಪಕ್ಷದ ನಾಯಕ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಪಿಬಿಎಸ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರದ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ನಡೆಸಿದರು. ಅನುಮತಿ ಪಡೆಯದೆ ಉಪವಾಸ ನಡೆಸುತ್ತಿದ್ದ ಅವರನ್ನು ಸೋಮವಾರ(ಜ.6)  ಬಂಧಿಸಲಾಗಿತ್ತು. ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಬಿಡುಗಡೆಗೊಂಡು ಪಾಟ್ನಾದ ತಮ್ಮ ನಿವಾಸಕ್ಕೆ ಬಂದ ಅವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಇದರ ನಡುವೆ ಸೋಮವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟಿತು ಕೂಡಲೇ ಅವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಿಶೋರ್ ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ‘ಪ್ರಶಾಂತ್ ಕಿಶೋರ್ ಅವರು ನಿರ್ಜಲೀಕರಣ, ಗಂಟಲು ಅಲರ್ಜಿ, ಗ್ಯಾಸ್ಟ್ರಿಕ್ ಸಮಸ್ಯೆ, ದೈಹಿಕ ದೌರ್ಬಲ್ಯ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗೆ ಒಳಗಾಗಲಿದ್ದಾರೆ’ ಸದ್ಯ ಅವರಿಗೆ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

Advertisement

Udayavani is now on Telegram. Click here to join our channel and stay updated with the latest news.

Next