ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ್ ತಮ್ಮ ಅವಧಿಯಲ್ಲಿ ಯಾವುದಾದರೊಂದು ಉತ್ತಮ ಕಾಮಗಾರಿ ಮಾಡಿದ್ದನ್ನು ತೋರಿಸಲಿ, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.
ಮಲ್ಲಿಕಾರ್ಜುನ್ ಸವಾಲು ಹಾಕಿದ್ದಾರೆ.
ಸೋಮವಾರ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಮುಂದಿನ ಪಿಬಿ ರಸ್ತೆಯಲ್ಲಿನ ಯುಜಿ ಕೇಬಲ್ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸಂಸದರ ವಿರುದ್ಧ ಹರಿಹಾಯ್ದ ಮಲ್ಲಿಕಾರ್ಜುನ್, ನಮ್ಮ ತಂದೆ ಶಿವಶಂಕರಪ್ಪನವರಿಗೆ ವಯಸ್ಸಾಗಿದೆ ಎಂಬುದಾಗಿ ಸಿದ್ದೇಶ್ವರ್ ತಮ್ಮ ದೇಹದ ಒಂದೊಂದೇ ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಏಕವಚನದಲ್ಲಿ ಹೇಳಿದರು.
ಸಂಸದರಿಗೆ ನಗರದಲ್ಲಿ ಯಾವ ರಸ್ತೆ ಎಲ್ಲಿವೆ? ಎಂಬುದು ಗೊತ್ತಿಲ್ಲ. ಸುಮ್ಮನೆ ಬಾಯಿಗೆ ಬಂದಿದ್ದನ್ನು ಹೇಳುತ್ತಾರೆ. ಅವರ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಇದುವರೆಗೆ ದುಡ್ಡೇ ಬಂದಿರಲಿಲ್ಲ. ಮೊನ್ನೆಯಷ್ಟೇ ಮೂರು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣ ಕೇಂದ್ರ ಸರ್ಕಾರದ ದುಡ್ಡಿಂದಲ್ಲ. ಕೇಂದ್ರ ಸರ್ಕಾರ 500 ಕೋಟಿ ರೂ. ಕೊಟ್ಟರೆ, ರಾಜ್ಯ ಸರ್ಕಾರ 700 ಕೋಟಿ ರೂ. ಕೊಡಲಿದೆ ಎಂದರು.
ವಿಪಕ್ಷದವರು ನಗರದಲ್ಲಿ ಎಷ್ಟು ಚರಂಡಿ ಇವೆ. ಅವು ಎಲ್ಲಿ ಹರಿದು ಹೋಗಿ ತಲುಪುತ್ತವೆ ಎಂಬುದನ್ನು ತಿಳಿದುಕೊಳ್ಳಲಿ. ಆಮೇಲೆ ರಾಜಕೀಯ ಮಾಡಲು ಬರಲಿ. ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆ ಕಾಮಗಾರಿ ಚಾಲನೆ ನೀಡಲು ಸಂಸದರು ಅಧಿಕಾರಿಗಳಿಗೆ ಹೇಳಿ, ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಲು ತಿಳಿಸಿದ್ದರಂತೆ. ಅದು ಯಾಕೆ? ಅವರನ್ನೂ ಕರೆಸಿ, ಎಂಬುದಾಗಿ ನಾನು ಹೇಳಿದ್ದೆ. ಆದರೆ, ಬರಲಿಲ್ಲ. ನಾವು ಶನಿವಾರ ಕಾಮಗಾರಿಗೆ ಚಾಲನೆ ನೀಡಿದರೆ, ಅವರು ಸೋಮವಾರ ಮತ್ತೂಮ್ಮೆ ಚಾಲನೆ ನೀಡಿದರು ಎಂದು ಅವರು ಹೇಳಿದರು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಕುರಿತು ಸಂಸದ ಯಾವುದೇ ಸಭೆ ಮಾಡಿಲ್ಲ. ರಾಜ್ಯದ ಯಾವುದೇ ನಗರದಲ್ಲಿ ಇದುವರೆಗೆ ಈ ಯೋಜನೆಯಡಿ ಕಾಮಗಾರಿ ಆರಂಭ ಆಗಿಲ್ಲ. ನಮ್ಮಲ್ಲಿ ಇದೀಗ ಆರಂಭ ಆಗಿದೆ. ಅಧಿಕಾರಿಗಳನ್ನು ಹಿಡಿದು ಸಭೆ ಮಾಡಿ, ಅವರ ಬೆನ್ನು ಹತ್ತಿ ಕೆಲಸ ಮಾಡಿಸಿದ್ದಕ್ಕೆ ಕಾಮಗಾರಿ ಆರಂಭ ಆಗಿದೆ. ಸಂಸದರಿಗೆ ಇದೇನು ತಿಳಿದಿದೆ ಎಂದು ಪ್ರಶ್ನಿಸಿದ ಅವರು, ಒಂದಿಬ್ಬರು ಗೂಂಡಾಗಳನ್ನು ಇಟ್ಟುಕೊಂಡು ಪತ್ರಿಕೆ ಮೂಲಕ ಹೇಳಿಕೆ ಕೊಡುವ ಬದಲು ವೇದಿಕೆ ಕಾರ್ಯಕ್ರಮಗಳಿಗೆ ಬಂದು ಮುಖಾಮುಖೀ ಮಾತನಾಡಲಿ ಎಂದು ಅವರು ಸವಾಲು ಹಾಕಿದರು. ಅಶೋಕ
ಚಿತ್ರಮಂದಿರದ ಬಳಿಯ ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮದೇನು ಅಭ್ಯಂತರ ಇಲ್ಲ. ಜಿಲ್ಲಾಧಿಕಾರಿಗಳು ಇನ್ನೊಂದು ಅಂಡರ್ ಪಾಸ್ ನಿರ್ಮಿಸಲು ಹೇಳಿದ್ದಾರೆ. ಇದಕ್ಕೆ ಸಂಸದರು ಒಪ್ಪುತ್ತಿಲ್ಲ. ಇತ್ತ ಅವರು
ಕೊಟ್ಟ ನೀಲ ನಕಾಶೆಯನ್ನು ಸಾರ್ವಜನಿಕರು ಒಪ್ಪುತ್ತಿಲ್ಲ. ಇಬ್ಬರ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲಿ ಎಂದು ಅವರು ಹೇಳಿದರು.
ಅನಿತಾಬಾಯಿ ವಿರುದ್ಧ ಗೆಲ್ಲುವ ತಾಕತ್ತಿಲ
ಉತ್ತರ ಪ್ರದೇಶದ ಎಂಪಿಗಳಂತೆ ನಮ್ಮ ಎಂಪಿ ಸಹ ಗೂಂಡಾ ಇಟ್ಟುಕೊಂಡು ಓಡಾಡುತ್ತಾರೆ. ಆ ಗೂಂಡಾಗೆ ನಮ್ಮ ಮೇಯರ್ ಅನಿತಾಬಾಯಿ ವಿರುದ್ಧ ಸ್ಪರ್ಧಿಸಿ, ಗೆಲ್ಲುವ ತಾಕತ್ತಿಲ್ಲ. ಹೆಂಡ ಮಾರಿಕೊಂಡು, ಇಸೀ³ಟ್ ಆಡಿಸಿಕೊಂಡು ರಾಜಕೀಯ ಮಾಡ್ತಾರೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆದ್ರು ನಾವೇ ಮಾಡಿದ್ದು ಎಂದು ಹೇಳಿಕೊಂಡು ಹೋಗೋದು ಅವರಿಗೊಂದು ಚಟ ಆಗಿ ಹೋಗಿದೆ. ಅವರಿಗೆ ತಲೆ ಸರಿಯಿದ್ದಂತೆ ಕಾಣಲ್ಲ.
ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ ಶಾಸಕ