Advertisement

ಜಾತಿ-ಧರ್ಮ ಹೆಸರಲ್ಲಿ ರಾಜಕೀಯ ಸಲ್ಲ

05:38 PM Jun 07, 2022 | Team Udayavani |

ದೇವದುರ್ಗ: ಜಾತಿ, ಧರ್ಮ ಹೆಸರಲ್ಲಿ ದೇಶ ಒಡೆಯುವ ಕೆಲಸ ನಡೆದಿದೆ. ಅಂಗೈಯಲ್ಲಿ ಆಕಾಶ ತೋರಿಸಿ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿದರು.

Advertisement

ಪಟ್ಟಣದಲ್ಲಿ ನೂತನ ಕಾಂಗ್ರೆಸ್‌ ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿರುವ ಕೆಟ್ಟ ಸರಕಾರ ಕಿತ್ತು ಒಗೆಯಲು ಈ ಬಾರಿ ಮತದಾರರು ಒಳ್ಳೆ ನಿರ್ಣಯ ಕೈಗೊಳ್ಳುವ ಮೂಲಕ ಬದಲಾವಣೆ ಬಹಿಸಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದು ಎಂಟು ವರ್ಷವಾದರೂ ಜನಪರ ಯೋಜನೆ ತರದೇ ಜಾತಿ, ಧರ್ಮದ ವಿಷ ಬೀಜ ಬಿತ್ತುವುದೇ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು.

ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಸೀಟಿಗಳು ಗೆಲುವ ವಿಶ್ವಾಸವಿದೆ. ದುಷ್ಟ ಸರಕಾರ ರಾಜ್ಯವೇ ಬಡಮೇಲು ಮಾಡಿದೆ. ಇಂತಹ ವ್ಯವಸ್ಥೆ ಬದಲಾವಣೆ ಆಗಬೇಕಾದರೇ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಚುನಾವಣೆ ಎದುರಿಸಲು ಸಂಕಲ್ಪ ಮಾಡಬೇಕು. ಜಿಪಂ, ತಾಪಂ ಚುನಾವಣೆ ಹತ್ತಿರವಾಗುತ್ತಿವೆ. ಹೀಗಾಗಿ ಪಕ್ಷ ಸಂಘಟನೆ ಕುರಿತು ಶಕ್ತಿ ತುಂಬಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತರಲು ತಾಗ್ಯ, ಬಲಿದಾನ ಕಾಂಗ್ರೆಸ್‌ ಪಕ್ಷಕ್ಕೆ ಇತಿಹಾಸವಿದೆ. ಆದರೆ, ಬಿಜೆಪಿ ಪಕ್ಷಕ್ಕೆ ಯಾವುದೇ ಇತಿಹಾಸವಿಲ್ಲ. ಅನಿಲ ಅಂಬಾನಿಯಂತ ಕಂಪನಿಗಳು ಆರ್ಥಿಕ ಸ್ಥಿತಿ ಹೆಚ್ಚಿಸಲು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷ ಕೊಟ್ಟಂತ ಅನೇಕ ಜನಪರ ಯೋಜನೆಗಳು ಮುಂದುವರಿಸಿಕೊಂಡು ಹೋಗಲು ಆಗದೇ ವಿನಾಕಾರಣ ಟೀಕೆ ಮಾಡುತ್ತಿವೆ ಎಂದು ಆರೋಪಿಸಿದರು.

ಶಾಸಕ ಡಿ.ಎಸ್‌ ಹೂಲಗೇರಿ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಎಂಎಲ್ಸಿ ಶರಣಗೌಡ ಬಯ್ನಾಪುರು, ಎನ್‌. ಎಸ್‌ ಬೋಸರಾಜ್‌, ಎ.ರಾಜಶೇಖರ ನಾಯಕ ಮಾತನಾಡಿದರು.

Advertisement

ಇದೇ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್‌ ಇಟಗಿ, ರಾಮಣ್ಣ ಇರಬಗೇರಾ, ಶ್ರೀದೇವಿ ರಾಜಶೇಖರ ನಾಯಕ, ಜಯಶ್ರೀ ಶರಣಗೌಡ, ಸಿದ್ದಯ್ಯ ಗುರುವಿನತಾತ, ದಾನಪ್ಪ ಆಲ್ಕೋಡ್‌, ಅಮರೇಶ ಬಲ್ಲಿದವ್‌, ಅಬ್ದುಲ್‌ ಅಜೀಜ್‌, ಆದನಗೌಡ ಬುಂಕಲದೊಡ್ಡಿ, ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾಗರಾಜ ಪಾಟೀಲ್‌, ಗಂಗಪ್ಪಯ್ಯ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next