Advertisement

ಎಲ್‌ಐ ಎಫ್ಇ-ಲೈಫ್ ಗೆ ಪ್ರಧಾನಿ ಮೋದಿ ಚಾಲನೆ

11:26 PM Jun 05, 2022 | Team Udayavani |

ಹೊಸದಿಲ್ಲಿ: “ಪರಿಸರ ಸಂರಕ್ಷಣೆಯ ಆಂದೋಲನಕ್ಕಾಗಿ ರೂಪಿಸಲಾದ ಜೀವನಕ್ರಮ’ (ಎಲ್‌ಐ ಎಫ್ಇ-ಲೈಫ್) ಎಂಬ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವ ಪರಿಸರ ದಿನದಂದು (ಜೂ. 5) ಚಾಲನೆ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಮೋದಿಯವರ ವೀಡಿಯೋ ಸಂದೇಶದಲ್ಲಿ, ಪರಿಸರವನ್ನು ಸಂರಕ್ಷಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಜನರ ಜೀವನ ಶೈಲಿಯು ಹೇಗಿರಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪರಿಸರ ಉಳಿಸುವಂಥ ಜೀವನ ಕ್ರಮಗಳನ್ನು ಅಳವಡಿಸಿ ಕೊಂಡವರನ್ನು ಇಳೆಯ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

“ಈ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕಾಗಿ “ಮಿಷನ್‌ ಲೈಫ್’ ಎಂಬ ಧ್ಯೇಯದಡಿ ಹೆಜ್ಜೆಯಿ ಡಲಾಗುತ್ತದೆ. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮಲ್ಲಿ ಚಾಲ್ತಿಯಲ್ಲಿದ್ದ ಪುರಾತನ ತತ್ವಗಳನ್ನು ಭವಿಷ್ಯತ್ತಿನ ಒಳಿತಿಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಇದರ ಮುಖ್ಯ ಧ್ಯೇಯವಾಗಿದೆ” ಎಂದು ಮೋದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next