Advertisement

ಬೆಳಗಾವಿ: 7 ಕೋಟಿ ರೂ ಬೆಲೆಯ ನಕಲಿ ನೋಟುಗಳು ವಶ !

11:54 AM Apr 18, 2018 | |

ಬೆಳಗಾವಿ: ಚುನಾವಣಾ ಪ್ರಚಾರ ಬಿರುಸಾಗಿರುವ ವೇಳೆ ಬೆಳಗಾವಿಯಲ್ಲಿ ಮತದಾರರಿಗೆ ಹಂಚಲು ಬಚ್ಚಿಡಲಾಗಿದ್ದ 7 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಬುಧವಾರ  ಜಪ್ತಿ ಮಾಡಿದ್ದು, ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. 

Advertisement

ವಿಶ್ವೇಶ್ವರ ನಗರದ ಪಾಳು ಬಿದ್ದ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಅಪಾರ ಪ್ರಮಾಣದ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬಚ್ಚಿಡಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಚುನಾವಣಾ ಸಿಬಂದಿ ಮತ್ತು ಪೊಲೀಸರು ಜಂಟಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. 

ವಿಜಯ ಪುರ ಮೂಲದ ಅಜಿತ್‌ನಿಡೊಣಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next