Advertisement

ಪೊಲೀಸ್‌ ಸಮುಚ್ಚಯ ಫೆ. 20ರಂದು ಉದ್ಘಾಟನೆ : ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ

09:01 PM Feb 18, 2021 | Team Udayavani |

ಕಾರ್ಕಳ : ಉಡುಪಿ ಜಿಲ್ಲಾ ಪೊಲೀಸ್‌, ಕಾರ್ಕಳ ಪೊಲೀಸ್‌ ವಸತಿ ಗೃಹದ ನೂತನ ಕಟ್ಟಡದ ಉದ್ಘಾಟನೆ ಫೆ.20 ರಂದು ಅಪರಾಹ್ನ 3ಕ್ಕೆ ನಡೆಯಲಿದೆ.

Advertisement

ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸ ಲಿದ್ದಾರೆ. ಶಾಸಕ ವಿ. ಸುನಿಲ್‌ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಪೊಲೀಸ್‌ ಡಿಜಿ ಪ್ರವೀಣ್‌ ಸೂದ್‌ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಕಳ ಪೊಲೀಸ್‌ ಠಾಣೆ ಪಕ್ಕದಲ್ಲೆ ಪೊಲೀಸರ ಅನುಕೂಲಕ್ಕೆ ಈ ವಸತಿ ಗೃಹ ನಿರ್ಮಾಣವಾಗಿದೆ. 2018ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, 2019ರ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣ ವಾಗಬೇಕಿತ್ತು. ಆದರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಮೂಲಸೌಕರ್ಯ ಜೋಡಣೆ ಯಾಗದೆ ವಿಳಂಬವಾಗಿತ್ತು.

ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವತಿಯಿಂದ 92.20 ಕೋ.ರೂ ಮೊತ್ತದಲ್ಲಿ ಸಮುಚ್ಚಯ ನಿರ್ಮಾಣಗೊಂಡಿದೆ. ಎರಡು ಅಂತಸ್ತಿನ 4 ಬ್ಲಾಕ್‌ಗಳಲ್ಲಿ 48 ಕುಟುಂಬಗಳು ನೆಲೆಸಬಹುದು. ಕಾರ್ಕಳ ನಗರ, ಗ್ರಾಮಾಂತರ, ಅಜೆಕಾರ್‌ ಠಾಣೆಯ ವ್ಯಾಪ್ತಿಯ ಪೊಲೀಸರಿಗೆ ಇದು ಉಪಯುಕ್ತವಾಗಲಿದೆ. ಸುದಿನ ವರದಿ, ಶಾಸಕರ ಸ್ಪಂದನೆ ಪೊಲೀಸ್‌ ಠಾಣೆ ಸಮೀಪ ನೂತನವಾಗಿ ನಿರ್ಮಾಣಗೊಂಡ ವಸತಿಗೃಹ ಪೊಲೀಸರ ಸೇವೆಗೆ ವಿಳಂಬವಾಗುತ್ತಿರುವ ಕುರಿತು ಜ.24ರಂದು ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಮರುದಿನವೇ ಶಾಸಕ ವಿ. ಸುನಿಲ್‌ಕುಮಾರ್‌ ಪರಿಶೀಲನೆ ನಡೆಸಿದ್ದರು. ಸಮಸ್ಯೆ ನಿವಾರಿಸುವಂತೆ ಸೂಚಿಸಿ, ಶೀಘ್ರ ಉದ್ಘಾಟನೆಯ ಭರವಸೆ ನೀಡಿದ್ದರು. ಅದರಂತೆ ಈಗ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next